ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ತಾಲೂಕಿನಿಂದ ಹಾದು ಹೋಗಿರುವ ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ಇದು ನುಜ್ಜಿ ಯಿಂದ ಬಾಡಪೋಲಿ ಗ್ರಾಮದ ತನಕ ಸುಮಾರು 8 ಕಿ.ಮಿ ರಸ್ತೆ ಸಂಪೂರ್ಣ ಹಾಳಾಗಿದೆ. ಸರಿಪಡಿಸಲು ಕ್ರಮ ಜರುಗಿಸದೇ ಇದ್ದರೆ ಏಪ್ರಿಲ್ 3 ರಂದು ಅಣಶಿ ಯಲ್ಲಿ ಕುಣಬಿ ಸಮಾಜ ಮುಂದಾಳತ್ವದಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳು, ಸಾರ್ವಜನಿಕರ ಸಹಕಾರದಲ್ಲಿ ರಾಸ್ತಾರೋಖ ಮಾಡುವುದಾಗಿ ಸ್ಥಳಾಯರು ಮಂಜುನಾಥ್ ಮುನ್ನಳ್ಳಿ ತಹಶೀಲ್ದಾರ್ ಜೊಯಿಡಾ ರವರಿಗೆ ಮನವಿ ನೀಡಿದ್ದಾರೆ.
ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ಇದು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಸಂಚರಿಸುತ್ತಾರೆ. ಬಡರೋಗಿಗಳು, ಎಂಬ್ಯೂಲೆನ್ಸ, ಶಾಲಾ ಮಕ್ಕಳು, ಗರ್ಭಿಣಿ ಸ್ತ್ರೀಯರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ವ್ಯಾಪಾರ ವಹಿವಾಟು ಹಿನ್ನಡೆಯಾಗಿದೆ. ರಸ್ತೆ ಸರಿಪಡಿಸಲು ಹೋರಾಟ ಮಾಡುವ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಆಶ್ವಾಸನೆ ನೀಡಿ ಕಾಲ ದೂಡುತ್ತಿದ್ದಾರೆ. ಹೀಗಾಗಿ ರಸ್ತೆ ತಡೆ ಮಾಡುವುದು ಅನಿವಾರ್ಯವಾಗಿದೆ. ಕಾರಣ ಏಪ್ರಿಲ್ 3 ರಂದು ಅಣಶಿ ಯಲ್ಲಿ ಬೆಳಿಗ್ಗೆ 10 ಗಂ ಇಂದ ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ತಡೆದು ಉಗ್ರ ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಭಾರತಿ ಎನ್ ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ, ಸುಭಾಷ್ ಗಾವಡಾ ಅ.ಜಿ.ಕು.ಸ, ದಯಾನಂದ ಕುಮಗಾಳಕರ ಕಾರ್ಯದರ್ಶಿ ಕುಣಬಿ ಸಮಾಜ, ಪ್ರಮುಖರಾದ ದತ್ತಾರಾಮ ದೇಸಾಯಿ, ಮಹಾಬಲೇಶ್ವರ ಕಾಜುಗಾರ, ಮಾಬಳು ಕುಂಡಲಕರ, ವಿಷ್ಣು ಸಾವಂತ್, ದೀಪಕ ದೇಸಾಯಿ, ಅಲಕೇಶ ದೇಸಾಯಿ, ಗಜಾನನ ಕಾಜುಗಾರ, ಶಿವರಾಂ ಮಸ್ಕಾರ್, ಶಶಿಕಾಂತ ದೇಸಾಯಿ, ದತ್ತಾರಾಮ ಮಾಸ್ಕರ್, ವಿಠಲ ವೇಳಿಪ, ರತ್ನಾಕರ್ ವೇಳಿಪ, ಮಾದೇವ ಕಾಜುಗಾರ, ಮುಂತಾದವರು ಇದ್ದರು.
ಇಚ್ಚಾಶಕ್ತಿ ಇಲ್ಲದ ಗುತ್ತಿಗೆದಾರ.
ರಸ್ತೆ ಸರಿಪಡಿಸಲು ಸರ್ಕಾರದಿಂದ ಕಳೆದ ವರ್ಷ ಹಣ ಮಂಜೂರು ಮಾಡಲಾಗಿದೆ. ತಾವು ವಹಿಸಿದ ಗುತ್ತಿಗೆಯ ಕೆಲಸ ಮಾಡುವ ಬದಲು ಸಬ್ ಗುತ್ತಿಗೆ ನೀಡಿ ಹೆಚ್ಚಿನ ಕಮಿಷನ್ ಪಡೆಯುವ ಗುತ್ತಿಗೆದಾರನ ಕರಾಮತ್ತಿನಿಂದ ಕಾಮಗಾರಿ ಹಿನ್ನಡೆಗೆ ಕಾರಣ ಎನ್ನುತ್ತಾರೆ ಅಧಿಕಾರಿಗಳು..
