ಸುದ್ದಿ ಕನ್ನಡ ವಾರ್ತೆ
ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಉಪ ಕೇಂದ್ರ ರಾಮನಗರ ಜಿಲ್ಲಾ ಅಂದತ್ವ ನಿವಾರಣ ವಿಭಾಗ ಕಾರವಾರ 20 ಹಾಸಿಗೆಗಳ ಸರಕಾರಿ ಆಸ್ಪತ್ರೆ ರಾಮನಗರ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಎಸ್ ಜಿ ಎಂ ಆಯ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ ಇವರಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸನೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು 20 ಹಾಸಿಗೆಗಳ ಸರಕಾರಿ ಆಸ್ಪತ್ರೆಯ ರಾಮನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದ ಉದ್ಘಾಟಕ ರಾಗಿ ಡಾಕ್ಟರ್ ರಚಿತ್ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರು ದೀಪ ಬೆಳಗಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಸುಜಾತಾ ಉಕ್ಕಲಿ ತಾಲೂಕ ಆರೋಗ್ಯ ಅಧಿಕಾರಿಗಳು ಜೋಯಿಡಾ ಇವರು ಇಂತಹ ಶಿಬಿರಗಳಿಂದ ಬಡವರಿಗೆ ಅನುಕೂಲವಾಗುತ್ತದೆ ಮತ್ತು ಅವರ ಕಣ್ಣಿನ ಅಂಧತ್ವವನ್ನು ನಿವಾರಣೆ ಮಾಡಿ ಒಳ್ಳೆಯ ದೃಷ್ಟಿಕೊಡಲು ಸಾಧ್ಯವಾಗುತ್ತದೆ ಎಂದು ಮಾತನಾಡಿದರು ವಿನಾಯಕ್ ಚೌಹಾನ್ ಯೋಜನಾ ಸಂಯೋಜಕರು ಸ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯ ಹಳಿಯಾಳ ಇವರು ಇಂತಹ ಶಿಬಿರಗಳಿಂದ ಜನರಿಗೆ ಹಳಿಯಾಳ ದಾಂಡೇಲಿ ಜೋಯಿಡಾ ಭಾಗದ ಜನತೆಗೆ ಅನುಕೂಲವಾಗಿದೆ ಎಂದು ಹೇಳಿದರು ವಾದಿರಾಜ ಕಟ್ಟಿ ಪಿ ಆರ್ ಓ ಎಂ ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಸಿಗುವ ಆಸ್ಪತ್ರೆ ಸೌಲಭ್ಯಗಳು ಕುರಿತು ಮಾಹಿತಿ ನೀಡಿದರು ಡಾಕ್ಟರ್ ವಿಜಯಕುಮಾರ್ ಕೊಚ್ಚರಿಗಿ ಇವರು ಇಂತಹ ಶಿಬಿರಗಳ ಲಾಭ ಪಡೆದುಕೊಳ್ಳಿ ಎಂದು ಹೇಳಿದರು. ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಕಾರ್ಯಕ್ರಮವನ್ನು ನಿರೂಪಿಸಿದರು ಮನೋಹರ್ ಚವರಿಯವರ ಕ್ಷೇತ್ರ ಮೇಲ್ವಿಚಾರಕರು ಕಾರ್ಯಕ್ರಮವನ್ನು ವಂದಿಸಿದರು ಒಟ್ಟು 80 ಫಲಾನುಭವಿಗಳು ಭಾಗವಹಿಸಿದ್ದರು 23 ಜನರು ಕಣ್ಣಿನ ಪೊರೆ ತಪಾಸನೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ.
