ಸುದ್ದಿ ಕನ್ನಡ ವಾರ್ತೆ
ಹಳಿಯಾಳ :ಶ್ರೀ ತುಳಜಾಭವಾನಿ ಧಾರ್ಮಿಕ,ಶೈಕ್ಷಣಿಕ ಹಾಗೂ ಧರ್ಮಾರ್ಥ ಟ್ರಸ್ಟ್ ವತಿಯಿಂದ ಶ್ರೀ ತುಳಜಾಭವಾನಿ ದೇವಿ ಹಾಗೂ ಪರಿವಾರ ಮಂದಿರಗಳ 30ನೇ ಪ್ರತಿಷ್ಠಾವರ್ಧಂತಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈ ಉತ್ಸವದ ಅಂಗವಾಗಿ ನಾಳೆ ನಡೆಯಲಿರುವ ಶ್ರೀ ನವಚಂಡಿ ಹವನ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ,ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ,ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ. ಎಂದು ಶಾಸಕರು ಮತ್ತು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ರೂ ಆಗಿರುವ ಆರ್ ವಿ ದೇಶಪಾಂಡೆ ರವರು ಮನವಿ ಮಾಡಿದ್ದಾರೆ.
