ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಕುಣಬಿ ಸಮುದಾಯದ ಬಾಂಧವರು ತಮ್ಮ ಪಾರಂಪರಿಕ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಪ್ರಯುಕ್ತ ರಾಮನಗರದ ಹನುಮಾನ ಗಲ್ಲಿ,ನಾಗನಾಥ ಗಲ್ಲಿ,ಇನ್ನಿತರ ಕಡೆ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಯುವಕರು,ಹಿರಿಯರನ್ನು ಒಳಗೊಂಡ ಸುಗ್ಗಿ ಕುಣಿತ ತಂಡವು ವಾದ್ಯಗಳೊಂದಿಗೆ,ವಿವಿಧ ಪೋಷಾಕುನೊಂದಿಗೆ,ದೇವ-ದೇವತೆಯರ,ಪ್ರಕೃತಿಯ ಕುರಿತಾದ ಹಾಡನ್ನು ಹಾಡುವ ಮೂಲಕ ಸುಗ್ಗಿ ಕುಣಿತದ ಪ್ರದರ್ಶನದ ನಂತರ ಆಯಾ ಮನೆಯವರು ನೀಡಿದ ವಸ್ತುವಿನ ಇಲ್ಲವೇ ಹಣದ ರೂಪದಲ್ಲಿ ನೀಡಿದ ಕಾಣಿಕೆಗಳನ್ನು ಸ್ವೀಕರಿಸಿದರು.
