ಸುದ್ದಿ ಕನ್ನಡ ವಾರ್ತೆ
ಹಳಿಯಾಳ ಜೋಯಿಡಾ ಶಾಸಕರು ಮತ್ತು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಆದ ಆರ್ ವಿ ದೇಶಪಾಂಡೆ ಅವರು ಇಂದು ಹೋಳಿ ಹಬ್ಬದ ಬಣ್ಣ ದಲ್ಲಿ ಮಿಂದು ಸಂಭ್ರಮಿಸಿದರು.

ಕ್ಷೆತ್ರದ ಜನರು ಹೋಳಿ ಹಬ್ಬದ ಸಂಭ್ರಮ ದಲ್ಲಿರುವುದನ್ನು ಗಮನಿಸಿದ ಶಾಸಕರು ಹೋಳಿ ಬಣ್ಣ ದೊಂದಿಗೆ ಹೋಳಿ ಆಡುವಜನಸಾಮಾನ್ಯ ರೊಂದಿಗೆ ಬೆರೆತು ಅವರೊಂದಿಗೆ ಬಣ್ಣ ಎರಸಿ ಸಂಭ್ರಮ ಪಟ್ಟರು. ಕ್ಷೆತ್ರದ ಜನರು, ಮಹಿಳೆಯರು ಮಕ್ಕಳೊಂದಿಗೆ ಹೋಳಿ ಹಬ್ಬದ ಬಗ್ಗೆ ಮಾತನಾಡಿದರು. ವಿವಿಧ ಸಂಸ್ಕೃತಿ ಸಂಪ್ರದಾಯ ಗಳನ್ನು ಹೊಂದಿರುವ ಬಾರತದಲ್ಲಿ ವೈವಿದ್ಯತೆ ಯೊಂದಿಗೆ ಏಕತೆ ಇರುವ ಬಗ್ಗೆ ಸಂತಸ ಪಟ್ಟು ಬಣ್ಣ ಬಣ್ಣದೊಂದಿಗೆ ಫೋಟೋಕ್ಕೆ ಪೋಸು ಕೊಟ್ಟರು. ಕ್ಷೆತ್ರ ದಾದ್ಯoತ ಇಂದು ಹೋಳಿ ಆಚರಣೆ ನಡೆಯಿತು
