ಸುದ್ದಿ ಕನ್ನಡ ವಾರ್ತೆ

ಗೋವಾ: ಎಡತೊರೆಯ (ಕೆ. ಆರ್. ನಗರ, ಮೈಸೂರು ಜಿಲ್ಲೆ, ಕನಾ೯ಟಕ) ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮಿಜಿಯವರು, ಜಗದ್ಗುರು ಶ್ರೀ ಆದಿ ಶಂಕರಾಚಾಯ೯ರು ಭೇಟಿ ನೀಡಿದ ಎಲ್ಲ ಸ್ಥಳಗಳನ್ನು ದಾಖಲಿಸುವ ಒಂದು ಪವಿತ್ರವಾದ ಘನಕಾಯ೯ವನ್ನು ಕೈಗೊಂಡಿದ್ದಾರೆ. ಈ ಆಧ್ಯಾತ್ಮಿಕ ಆರಂಭವನ್ನು “ಶಂಕರ ಜ್ಯೋತಿ ಪ್ರಕಾಶ ” ಎಂದು ಕರೆಯಲಾಗಿದೆ. ಈ ಧಮ೯ಕಾಯ೯ದ ನಿಮಿತ್ತ, ಪಂಡಿತರು ಮತ್ತು ಶಿಷ್ಯರೊಂದಿಗೆ, ಸ್ವಾಮಿಜಿಯವರು ದೇಶದಾದ್ಯಂತ ಸಂಚರಿಸುತ್ತಿದ್ದಾರೆ.

ಶ್ರೀಗಳು ಗೋವಕ್ಕೆ ಫೆಬ್ರುವರಿ ೨೮ ರ ಸಂಜೆ ತಲುಪಿ, ಮಾಚ೯ ೪ ನೇಯ ಬೆಳಿಗ್ಗೆ ಇಲ್ಲಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡುತ್ತಾರೆ.

ಈ ಅವಧಿಯಲ್ಲಿ ಗೋವಾದ ಕೆಲವು ಪುರಾತನ ದೇವಾಲಯಗಳಾದ ಶಾಂತಾದುರ್ಗಾ ದೇವಸ್ಥಾನ ಕವಳೇ, ಮಹಾಲಸಾ ನಾರಾಯಣಿ ದೇವಸ್ತಾನ ಮಾರ್ದೋಲ್, ಮಂಗೇಶಿ ದೇವಸ್ಥಾನ, ಮಹಾರುದ್ರ, ಹರವಳೆ, ಪಾಂಡವ ಗುವಾ ದೇವಾಲಯದ ಪ್ರದೇಶ, ವಿಮಲೇಶ್ವರ ದೇವಸ್ಥಾನ – ರಿವೋಣಾ, ಎರಡು ಗೂಹಾ ಪ್ರದೇಶ, ಮುಂತಾದ ಅನೇಕ ಪ್ರದೇಶಗಳಲ್ಲಿ ಭೇಟಿ ನೀಡಿ ಕೆಲವು ಶೀಲಾಶಾಸನ, ಚಿತ್ರ ಬರಹ, ವಾಸ್ತುಶಿಲ್ಪ, ಮುಂತಾದ ಮಹತ್ವ ದ ದಾಖಲೆಗಳನ್ನು ಸಂಗ್ರಹಿಸಿದರು. ಅವರು ಈ ಸಂದರ್ಭದಲ್ಲಿ ತಮ್ಮ ವಸತಿಯನ್ನು

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಬಂದೋರ , ಪೊಂಡ , ಗೋವಾ .ಮಾಡಿದರು. ಈ ಸಂದರ್ಭದಲ್ಲಿ ಸ್ವರ್ಣವಲ್ಲಿ ಸೀಮಾ ಪರಿಷತ್ ಗೋವಾ ವತಿಯಿಂದ ಪಾದಪೂಜೆ, ಭೀಕ್ಷಾ ವಂದನೆ, ಶ್ರೀಚಕ್ರ ಪೂಜೆ, ಮಾತೆಯರಿಂದ

ಸೌಂದರ್ಯ ಲಹರಿ ಸ್ತೋತ್ರ ಪಠಣ.ಮುಂತಾದ ಗುರು ಸೇವೆಯನ್ನು ಮಾಡಿದ್ದಾರೆ,
ಸ್ವರ್ಣವಲ್ಲಿ ಸೀಮಾ ಪರಿಷತ್ ಗೋವಾ ಸದಸ್ಯರುಗಳಾದ ಶ್ರೀ ಸೀತಾರಾಮ ಭಟ್ ಮಾಡಗಾವ್, ಶಿವರಾಮ ಭಟ್ ಪಣಜಿ, ಶಂಕರ ಭಟ್- ಮಾಡಗಾವ್, ವಿಶ್ವನಾಥ ಭಟ್- ಪಣಜಿ, ನವೀನ ಭಟ್- ಪಣಜಿ ಮುಂತಾದವರು ಸಹಕಾರ ನೀಡಿದರು.