ಸುದ್ದಿ ಕನ್ನಡ ವಾರ್ತೆ
ಬೆಂಗಳೂರು- ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾಗಿ ಆರನೆಯ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಡಾ.ಅರವಿಂದ ಜತ್ತಿ ಅವರಿಗೆ ಶಿವಾನುಭವ ಚರಮೂರ್ತಿ ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಸನ್ಮಾನಿಸಿ,ಅಭಿನಂದಿಸಿದರು.
ಶಿವಾನುಭವ ಚರಮೂರ್ತಿ ಬೇಲಿಮಠದ ಶಿವರುದ್ರ ಮಾಹಾಸ್ವಾಮಿಗಳು ಮಾತನಾಡಿದಬಸವ ಸಮಿತಿಯ ಆರು ದಶಕಗಳ ಕಾರ್ಯಸಾಧನೆಗಳ ಪಕ್ಷಿನೋಟವನ್ನು ವಿವರವಾಗಿ ವಿವರಿಸಿದರು.
1964 ರಲ್ಲಿ ಸ್ಥಾಪನೆಯಾದ ಬಸವ ಸಮಿತಿಯು ಹಂಪಿಯಿಂದ-ಬಸವ ಕಲ್ಯಾಣದವರೆಗೆ 28 ದಿನಗಳ ಐತಿಹಾಸಿಕ ಪಾದಯಾತ್ರೆ,
ಬಸವಣ್ಣನವರ ರಾಷ್ಟ್ರಮಟ್ಟದ ಅಷ್ಟಶತಮಾನೋತ್ಸವ ಕಾರ್ಯಕ್ರಮ ಭಾರತದ 3ನೇ ರಾಷ್ಟ್ರಪತಿಗಳಾದ
ಡಾ. ಜಾಕೀರ್ ಹುಸೇನ್ ಅವರಿಂದ ಉದ್ಘಾಟನೆ,
ಬಸವ ಸಮಿತಿ ಕಟ್ಟಡಗಳ ನಿರ್ಮಾಣ, ಪದ್ಮಶ್ರೀ ಡಾ. ಶಿವಮೂರ್ತಿಶಾಸ್ತ್ರಿ ಗ್ರಂಥ ಭಂಡಾರ ಪ್ರಾರಂಭ,ಹೊರ ರಾಜ್ಯಗಳಲ್ಲಿ ಬಸವತತ್ವ ಪ್ರಚಾರ, ಬಸವತತ್ವ ವಿಶ್ವಮಟ್ಟದಲ್ಲಿ ಪ್ರಸಾರ ಮಾಡಲು ಬಿಬಿಸಿ ಮಾಧ್ಯಮದ ಐತಿಹಾಸಿಕ ಕ್ರಮ, ಬಸವ ಸಮಿತಿಯ ನಿಯತಕಾಲಿಕೆಗಳ ಪ್ರಾರಂಭ,ಕೂಡಲ ಸಂಗಮ ಪ್ರಾಧಿಕಾರ ರಚನೆಯ ಕಾಯಕಲ್ಪ, ಕಾಯಕ ವಿದ್ಯಾಪೀಠ ,ಧರ್ಮತತ್ವ ವಿವೇಚನಾ ಕೂಟದ ಪ್ರಾರಂಭ , ಮಿಲ್ಲರ್ ರಸ್ತೆಗೆ ಶ್ರೀ ಬಸವೇಶ್ವರ ರಸ್ತೆ – ನಾಮಕರಣ , ಬಸವ ಸಮಿತಿಯ ಬೆಳ್ಳಿಯ ಹಬ್ಬ , ಬಸವ ಸಮಿತಿಯ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ,ಬೆಂಗಳೂರಿನಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ , ಭಾರತದ ಉಪರಾಷ್ಟ್ರಪತಿಗಳಾದ ಕೆ. ಆರ್.
ನಾರಾಯಣನ್ ಅವರಿಂದ ,
ನಿರಂತರ ಅರಿವಿನ ಮನೆ ಕಾರ್ಯಕ್ರಮಗಳು, ವಚನ ಶ್ರಾವಣ ಹಾಗೂ ಕವಿ ಕಾರ್ತೀಕ ಉಪನ್ಯಾಸ ಮಾಲೆ ,ವಿಚಾರ ಸಂಕಿರಣಗಳು,
ಭಾರತದ ಪ್ರಧಾನಮಂತ್ರಿಗಳಾದ ಭಾರತರತ್ನ ಅಟಲ್ಬಿಹಾರಿ ವಾಜಪೇಯಿ ಅವರಿಂದ ಬಸವ ಜಯಂತಿ
ಉದ್ಘಾಟನೆ, ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಕಾಯಕಲ್ಪ , ಬೆಳಗಾವಿಯಲ್ಲಿನ ಶರಣೆ ಗಂಗಾಂಬಿಕೆಯವರ ಗದ್ದುಗೆ ಜೀರ್ಣೋದ್ಧಾರದ ರೂವಾರಿ ,ವಚನಾಧಾರಿತ ವಚನ ವ್ಯಕ್ತಿತ್ವ ವಿಕಸನ ನಿರಂತರ ಕಾರ್ಯಕ್ರಮಗಳು , ಬಸವ ವಾಹಿನಿ ಕಾರ್ಯಕ್ರಮಗಳು,
ವಚನಾಧಾರಿತ ಬಸವ ದಿನಚರಿ,ಭಾರತದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಮನಮೋಹನ್ ಸಿಂಗ್ ಅವರಿಂದ ಬಸವ ನಾಣ್ಯ ಲೋಕಾರ್ಪಣೆ, ದೃಶ್ಯ ಮಾಧ್ಯಮದಲ್ಲಿ ‘ವಚನಾಮೃತ’ ಸಂಸತ್ ಭವನದ ಆವರಣದಲ್ಲಿ ಬಸವಣ್ಣನವರ ಮತ್ತು ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆಗಳ ಸ್ಥಾಪನೆಯ ರೂವಾರಿ ,ವಚನ ಸಾಹಿತ್ಯ – ಬಹುಭಾಷಾ ಅನುವಾದ ಯೋಜನೆ, ಹೊರರಾಷ್ಟ್ರಗಳಲ್ಲಿ ಬಸವತತ್ವ ಪ್ರಸಾರ – ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸಿಂಗಪೂರ್, ದಕ್ಷಿಣ ಏಷ್ಯಾ ಫೆಸಿಫಿಕ್, ಯುನೈಟೆಡ್ ಅರಬ್ ಎಮಿರೇಟ್ಸ್, ಗ್ರೇಟ್ ಬ್ರಿಟನ್ & ಉತ್ತರ ಐರ್ಲೆಂಡ್, ಯೂರೋಪ್, ಅಮೇರಿಕಾದ, ವಿಎಸ್ಎನ್ಎ ಕೇಂದ್ರಗಳಲ್ಲಿ ಬಸವ ತತ್ವಗಳ ಅನುಷ್ಠಾನ,ವಿಶ್ವಕಾಯಕ ದಿನಾಚರಣೆ – ಕಲ್ಪನೆಯ ಅನುಷ್ಠಾನ ಬಸವ ಜಯಂತಿ ಶತಮಾನೋತ್ಸವದ ಸಂಸ್ಮರಣೆಯಲ್ಲಿ ಕರ್ನಾಟಕದಾದ್ಯಂತ ಶರಣ ಸಂಸ್ಕೃತಿ ಮಹಾಯಾತ್ರೆ , ಬಹುಭಾಷಾ ವಚನ ಅನುವಾದ ಪ್ರಥಮ ಹಂತದ ೧೦ ಭಾಷಾ ಸಂಪುಟಗಳ ಉಪರಾಷ್ಟ್ರಪತಿಗಳಾದ ಡಾ. ಹಮೀದ್ ಅನ್ಸಾರಿ ಅವರಿಂದ ಲೋಕಾರ್ಪಣೆ ಕಲಬುರ್ಗಿ ಬಸವ ಸಮಿತಿ ವತಿಯಿಂದ ‘ಅನುಭವ ಮಂಟಪ’ ನಿರ್ಮಾಣ ,ಧಾರವಾಡ ಬಸವ ಸಮಿತಿ ಕೇಂದ್ರ ಪ್ರಾರಂಭ, ವಿಶ್ವ ಬಸವ ಜಯಂತಿ ಆಚರಣೆ – ಭಾರತದ ಪ್ರಧಾನ ಮಂತ್ರಿಗಳಿಂದ 23 ಭಾಷೆಗಳಲ್ಲಿ ವಚನ ಸಂಪುಟಗಳ
ಬಿಡುಗಡೆ ,ಐತಿಹಾಸಿಕ ಬಸವ ಸಂದೇಶ ಯಾತ್ರೆ , ಆಂಧ್ರಪ್ರದೇಶ ಮತ್ತು ತೆಲಂಗಾಣ, ಕೇರಳ ಮತ್ತು ಮಹಾರಾಷ್ಟ್ರದ ಜಿಲ್ಲೆಗಳಲ್ಲಿ , ನೂತನ ಸಂಸತ್ ಭವನದ ಸೆಂಟ್ರಲ್ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು. ವಿಸ್ತಾದಲ್ಲಿ ಬಸವಾದಿ ಶರಣರ ಪ್ರಜಾಪ್ರಭುತ್ವದ ನೆಲೆಗಳನ್ನು ಬಿಂಬಿಸುವ ಆಯ್ದ ವಚನಗಳ ಅನಾವರಣ, 12ನೇ ಶತಮಾನದ ಶರಣ ಸ್ಮಾರಕಗಳ 3 ಸಂಪುಟಗಳ ಗ್ರಂಥ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ, ತನ್ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈವರೆವಿಗೂ ೧೦ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ
೪೦ ವಿದೇಶಿ ಭಾಷೆಗಳಾದ ಅರಾಬಿಕ್, ಪರ್ಷಿಯನ್, ಫ್ರೆಂಚ್, ನೇಪಾಳಿ, ರಷ್ಯನ್ ಭಾಷೆಯಲ್ಲಿ ವಚನ ಸಂಪುಟಗಳು ಮುದ್ರಣಗೊಂಡಿದ್ದು, ಸ್ಪ್ಯಾನಿಷ್, ಮಂದಾರಿನ್, ಜರ್ಮನ್, ಜಪಾನೀಸ್, ಉಜ್ಬೆಕ್ ಭಾಷೆಗಳಲ್ಲಿ ‘ವಚನ’ ಅನುವಾದ ಕಾರ್ಯ ಪ್ರಗತಿಯಲ್ಲಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಆನ್ಲೈನ್ ಅರಿವಿನ ಮನೆ ಕಾರ್ಯಕ್ರಮಗಳು ಅನುಭವ ಮಂಟಪ ಅತ್ಯಾಧುನಿಕ ರೀತಿಯಲ್ಲಿ ನವೀಕರಣ , ಬಸವ ಕಲ್ಯಾಣದಲ್ಲಿನ ಐತಿಹಾಸಿಕ ಪರುಷಕಟ್ಟೆ ಜೀರ್ಣೋದ್ಧಾರ
ಬಸವಯುಗದ ವಚನಗಳ ಪರಿಷ್ಕರಣ ಕ್ರಿಯಾಯೋಜನೆ (10 ಸಂಪುಟಗಳಲ್ಲಿ) ತರೀಕೆರೆಯಲ್ಲಿನ ಶರಣೆ ಅಕ್ಕನಾಗಮ್ಮನವರ ಗದ್ದುಗೆ ಜೀರ್ಣೋದ್ಧಾರ,ಸ್ಮಾರಕಗಳ ಸಂರಕ್ಷಣೆಗೆ ಕರ್ನಾಟಕ ಸರ್ಕಾರದಿಂದ ಪ್ರಾಚ್ಯ ಇಲಾಖೆಯ ಸುಪರ್ದಿಗೆ ಮಾಡಿದ ಸಫಲ ಪ್ರಯತ್ನ , ಉ-20 ಶೃಂಗಸಭೆಯಲ್ಲಿ ಮಂಡಿಸಲಾದ ವಚನ ಅನುವಾದದ ಪ್ರಸ್ತಾವನೆ ,
ಬಸವ ಸಮಿತಿಯಲ್ಲಿ ಡಿಜಿಟಲ್ ವಿಭಾಗವನ್ನು ಪ್ರಾರಂಭಿಸಿ, ತನ್ಮೂಲಕ ಆನ್ಲೈನ್ ಅರಿವಿನ ಮನೆಯ ಕಾರ್ಯಕ್ರಮಗಳು ಪ್ರಸಿದ್ಧವಾಗಿ ವಿಕಾಸಗೊಂಡು, ವರ್ಷಕ್ಕೆ ಅಂದಾಜು 10-15 ಲಕ್ಷ ವೀಕ್ಷಕರು ವೀಕ್ಷಿಸುತ್ತಿರುವುದು ಅಭಿಮಾನದ ಸಂಗತಿ. ಸಂಪೂರ್ಣ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಒಳಗಾಗಿ ಇನ್ನೊಂದು ವರ್ಷದಲ್ಲಿ ಗ್ರಂಥಭಂಡಾರವು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತದೆ ಎಂಬುದನ್ನು ಸೂಚಿಸಲು ಹರ್ಷವೆನಿಸುತ್ತದೆ. ಬಸವ ಸಮಿತಿಯ ಅಧ್ಯಕ್ಷರು ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಶಾಶ್ವತ ಸದಸ್ಯರು ಆಗಿರುವುದರಿಂದ ಸರ್ಕಾರದ ಪ್ರತಿಷ್ಠಿತ ಬಸವ ಕಲ್ಯಾಣದ ಅನುಭವ ಮಂಟಪದ ಅಂತರ್ ವಿನ್ಯಾಸದಲ್ಲಿ ಏಳು ನೂರು ಎಪ್ಪತ್ತು ಶರಣರ ಹೆಸರುಗಳನ್ನು, 40 ಭಾಷೆಗಳ ವಚನಗಳನ್ನು ಡಿಜಿಟಲ್ ಪ್ರದರ್ಶನಕ್ಕೆ ಒಳಗುಮಾಡಿ, ಇನ್ನುಳಿದ ಸಭಾಂಗಣಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ವಿಭಾಗಗಳಿಗೂ ಕೂಡ ವಿಷಯ ಸಮಿತಿಯ ಸದಸ್ಯರಾಗಿ ಬಸವ ಸಮಿತಿಯ ವತಿಯಿಂದ ಸಾಕಷ್ಟು ಬೆಳಕು ಚೆಲ್ಲಿದ ಕಾರ್ಯಸಾಧನೆ ಅನಿರ್ವಚನೀಯ. ಬೆಂಗಳೂರು ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯ, ದ್ರಾವಿಡ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ-ಧಾರವಾಡ, ಕಾಶ್ಮೀರ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ನೇಹು ವಿಶ್ವವಿದ್ಯಾಲಯ-ಮೇಘಾಲಯ, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ಲಕ್ನೋ ವಿಶ್ವವಿದ್ಯಾಲಯಗಳೊಡನೆ ಒಡಂಬಡಿಕೆಯ ಐತಿಹಾಸಿಕ ಸಾಧನೆ.
ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷರಾದ ಪಭುದೇವ ಚಿಗಟೇರಿ,ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ ಮತ್ತು ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಸದಸ್ಯರು,ಪ್ರಭಾಶಂಕರ ಪ್ರೇಮಿ,ದಿಬ್ಬೂರು ಗಿರೀಶ,ಎಚ್..ಎಸ್.ದೇವಾಡಿಗ,ಸುನಿಲಕುಮಾರ ರಗಟೆ,ಶ್ರೀಮತಿ ಶಾರದಾ ಅರವಿಂದ ಜತ್ತಿ, ಶ್ರೀಮತಿ ಭುವನೇಶ್ವರಿ ಕಿಲಪಾಡಿ ಸಂಯೋಜಕರಾದ ಸಾಸಲು ವಿಶ್ವನಾಥ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಿರ್ದೇಶಕರಾದ ನಂಜಪ್ಪ ಸ್ವಾಗತಿಸಿದರು.
