ಸುದ್ದಿ ಕನ್ನಡ ವಾರ್ತೆ
ಶಿರಸಿ: ನಗರದ,ದಕ್ಷಿಣ ಭಾರತದ ಸುಪ್ರಸಿದ್ಧ ಶಿರಸಿ ಮಾರಿಕಾಂಬೆಯ ದೇವಿಯ ಜಾತ್ರೆಯ ಪ್ರಯುಕ್ತ ಫೆ.26ರಿಂದ ಮಾ.3 ರವರೆಗೆ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ (ರಿ) ಶಿರಸಿ ವತಿಯಿಂದ ನಟ-ರಾಜ ರಸ್ತೆಯ ಉಣ್ಣೆಮಠಗಲ್ಲಿಯ ವಾಜಪೇಯಿ ಸರ್ಕಲ್ ನಲ್ಲಿ ಪ್ರತಿ ಜಾತ್ರೆಯಂತೆ ಈ ಜಾತ್ರೆಯಲ್ಲೂ ಸಹ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.
ವ್ಯವಸ್ಥಿತವಾಗಿ ನಿರ್ಮಿಸಿರುವ ಪೆಂಡಾಲಿನಲ್ಲಿ ಪ್ರತಿನಿತ್ಯ ಸುಮಾರು ಐದು ಸಾವಿರ ಜನರಿಗೆ ಶುಚಿರುಚಿಯಾದ ಗುಣಮಟ್ಟದ ಭೋಜನ ವ್ಯವಸ್ಥೆಯನ್ನು ಕಳೆದ ಏಳು ಜಾತ್ರೆಗಳಲ್ಲಿಯೂ ಹಮ್ಮಿಕೊಂಡು ಸದ್ದಿಲ್ಲದೇ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸೇವೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.ಬಿಳಗಿ ರಾಯರ ಕುಟುಂಬದವರ ಸ್ಥಳದಾನ ಮತ್ತು ಸಾರ್ವಜನಿಕರ ಸಹಾಯ ಸಹಕಾರದೊಂದಿಗೆ ಜರುಗುತ್ತಿರುವ ಈ ಮಹತ್ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿರುವ ಟ್ರಸ್ಟ್ ನ ಸಚಿನ ಶಂಕರ ಕೊಡ್ಕಣಿ, ಕೇಶವ ಅನಂತ ಪಾಲೇಕರ, ಶ್ರೀಪತಿ ನಾಯ್ಕ, ಸತೀಶ ನಾಯ್ಕ ಮಧುರವಳ್ಳಿ, ಕಿರಣ ಮಡಿವಾಳ, ಉದಯ ಶೆಟ್ಟಿ, ರಾಜೇಶ ಮೈದುರ್ಗಿಮಠ, ಶಂಕರ ಬಿ ಗುಡ್ಡದಮನೆ, ಶ್ರೀಮತಿ ಪ್ರಭಾ ಕಿರಣ, ದಿನೇಶ ನಾಯ್ಕ, ರಾಜೇಶ ಚಾವಡಿ ಇವರುಗಳು ಶ್ರಮ ಮತ್ತು ಪ್ರಾಮಾಣಿಕ ಮತ್ತು ಸಾರ್ವಜನಿಕರ ಸಹಾಯ ಸೇವೆಯಿಂದ ಭಕ್ತಾದಿಗಳ ಮನಗೆದ್ದ ಸಹಕಾರದೊಂದಿಗೆ ಜರುಗುತ್ತಿರುವ ಸಾರ್ಥಕಭಾವ ಇವರದ್ದಾಗಿದೆ.
