Banner Ad

ಸುದ್ದಿ ಕನ್ನಡ ವಾರ್ತೆ

ತಾಲೂಕಿನಲ್ಲಿ ಬಿದ್ದ ಭಾರಿ ಮಳೆ ಗೆ ಜನ ಜೀವನ ತತ್ತರಿಸಿ ಹೋಗಿದೆ. ಇಂದು ಮದ್ಯಾಹ್ನ 4 ಘಂಟೆ ಯಿಂದ ಆರಂಭ ವಾದ ಮಳೆ ಬಿರುಗಾಳಿಯ ಆರ್ಭಟ ದೊಂದಿಗೆ ಬಿದ್ದಿದೆ.

Banner Ad

ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮ ಗಳಲ್ಲೂ ಮಳೆ ಗಾಳಿಯ ರಬಸಕ್ಕೆ ಸಿಕ್ಕಾಪಟ್ಟೆ ಅನಾಹುತಗಳು ನಡೆದಿವೆ.

ಶೇವಾಳಿ ಗ್ರಾಮ ದಲ್ಲಿ ಹಲವಾರು ಅಡಿಕೆ ಮರಗಳು ನೆಲ ಕಚ್ಚಿವೆ ಸೀಟ್ ಗಳು ಕಿತ್ತು ಹಾರಿವೆ ಕೊಂಬಾ ದಲ್ಲೂ ಅಡಿಕೆ ಮರಗಳು, ವಿದ್ಯುತ್ ಕಂಬ ಗಳು ಬಿದ್ದಿವೆ, ಗುಂದ ದಲ್ಲಿ ಮಳೆಯ ರಬಸಕ್ಕೆಹೇಳಲಾರದಷ್ಟು ಹಾನಿ ಯಾಗಿದೆ, ಊರಿನ ಎಲ್ಲ ಕಡೆ ಹಳ್ಳ ಕೊಳ್ಳ ಗಳು ತುಂಬಿ ಹರಿದಿವೆ.

ಚಾಲಿ ಅಡಿಕೆ ಒಣಗಲು ಬಿಟ್ಟಿದ್ದು ಮಳೆಯ ರಬಸಕ್ಕೆ ಕೊಚ್ಚಿ ಹೋಗಿವೆ. ಇನ್ನಷ್ಟು ಅನಾಹುತ ಗಳ ಮಾಹಿತಿ ಬರಬೇಕಾಗಿದೆ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡವರು ಪಡಬಾರದ ಕಷ್ಟ ಅನುಭವಿಸುವಂತೆ ಈ ಮಳೆ ಬಿರುಗಾಳಿಯಿಂದ ಆಗಿದೆ.

Banner Ad