ಸುದ್ದಿ ಕನ್ನಡ ವಾರ್ತೆ
ಭಟ್ಕಳ:ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕರಾದ ಮಾಸ್ತಪ್ಪ ನಾಯ್ಕ ಬಲ್ಸೇ ಅವರು 2026ನೇ ಸಾಲಿನ ಪ್ರತಿಷ್ಠಿತ “ಭಾರತದ ಕೈಗಾರಿಕಾ ಐಕಾನ್ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ದೇಶಾದ್ಯಂತ ಉದ್ಯಮಶೀಲತೆ, ನವೀನ ಆಲೋಚನೆಗಳು, ಸಾಮಾಜಿಕ ಜವಾಬ್ದಾರಿ ಹಾಗೂ ಯುವಶಕ್ತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಶ್ರಮಿಸುವ ನಾಯಕರಿಗೆ ಈ ಮಹತ್ವದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಮಾಸ್ತಪ್ಪ ನಾಯ್ಕ ಬಲ್ಸೇ ಅವರ ದೀರ್ಘಕಾಲದ ಪರಿಶ್ರಮ, ದೃಢನಿಷ್ಠೆ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರದ ಅಭಿಮಾನಿ ಬಳಗಗಳು ಹರ್ಷ ವ್ಯಕ್ತಪಡಿಸಿವೆ. ಇಲ್ಲಿಯವರೆಗೆ ಅವರು ಪಡೆದ ಸನ್ಮಾನಗಳು ಅವರ ಸಾಧನೆಯ ಗುರುತುಗಳಾದರೆ, ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನಗಳು ಹಾಗೂ ಜನಮನ್ನಣೆ ಲಭಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಸಮಾಜದಲ್ಲಿ ಅವರು ಬೆಳಗುವ ದೀಪವಾಗಿ ಇನ್ನೂ ಅನೇಕ ಮಂದಿ ಯುವಕರಿಗೆ ಪ್ರೇರಣೆಯಾಗಲಿ. ಮಾಸ್ತಪ್ಪ ನಾಯ್ಕ ಬಲ್ಸೇ ಅವರ ಜೀವನ ಯಶಸ್ಸು, ಗೌರವ ಮತ್ತು ಕೀರ್ತಿಯಿಂದ ಕಂಗೊಳಿಸಲಿ ಎಂದು ಅಭಿಮಾನಿ ಬಳಗದವರು ಹಾರೈಸಿದ್ದಾರೆ.
