ಸುದ್ದಿ ಕನ್ನಡ ವಾರ್ತೆ
ಕುಮಟಾ: ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳು ಎರಡು ವರ್ಷದ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, 21-02-2026 ರಂದು ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪಿ ಯು ಕಾಲೇಜಿನಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು.
ಪರಿಸರ ವಿಜ್ಞಾನಿಗಳಾದ ಶ್ರೀಯುತ ಕೇಶವ ಕೊರ್ಸೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ವಾತಾವರಣದ ಬಗೆಗೆ ಸಂತಸ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಒತ್ತಡ ನಿರ್ವಹಣೆ, ಸಮಯ ಪ್ರಜ್ಞೆ, ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಹೇಗೆ ಯಶಸ್ಸು ಸಾಧಿಸಬೇಕು ಎಂದು ಉತ್ತಮ ಉದಾರಹಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವoತೆ ವಿವರಿಸಿದರು. ಕೇವಲ ಶಿಕ್ಷಣದಲ್ಲಿನ ಪರೀಕ್ಷೆ ಒಂದೇ ಅಲ್ಲಾ ಜೀವನದ ಪರೀಕ್ಷೆಯಲ್ಲೂ ಉತ್ತಮ ಸಾಧಕರಾಗಿ ಎಂದು ಶುಭ ಹಾರೈಸಿದರು.ಅತಿಥಿಗಳಾಗಿ ಆಗಮಿಸಿದ ಹೊಸ ದಿಗಂತ ಪತ್ರಿಕೆಯ ಸಂಪಾದಕರಾದ ಶ್ರೀ ವಿನಾಯಕ ಭಟ್ಟ ಮಾತನಾಡಿ ಪರೀಕ್ಷೆಯಲ್ಲಿ ಅಂಕಗಳಿಕೆ ಅಷ್ಟೇ ಅಲ್ಲದೇ ಜೀವನ ಕೌಶಲ್ಯ ಬೆಳೆಸಿಕೊಳ್ಳಿ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಆತ್ಮ ವಿಶ್ವಾಸದಿಂದ ಮುಂದಿವರಿದು ಯಶಸ್ವಿ ಆಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಂಸ್ಥೆಯ ಆಡಳಿತ ಮಂಡಳಿಯ ವಿಶ್ವಸ್ತ ರಾದ ಶ್ರೀ ಡಿ. ಎನ್. ಭಟ್ಟ ಮಾತಾಡಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡು ಸಮಾಜಮುಖಿಯಾಗಿ ಬದುಕಿ ಸಮಾಜಕ್ಕೆ ಒಂದು ಆಸ್ತಿ ಆಗಿ ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ. ಹೆಗಡೆ ಅವರು ವಹಿಸಿಕೊಂಡು ಮಾತನಾಡಿದರು. ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದಿಂದ ಉತ್ತಮ ಸಾಧನೆ ಸಾಧ್ಯವೆಂದು ಅವರು ತಿಳಿಸಿದರು. ಮುಂದಿನ ಜೀವನ ಹಾದಿಯಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಹಂಕಾರ ತೊರೆದು ಜೀವನದಲ್ಲಿ ತಾಳ್ಮೆ, ಶಿಸ್ತು ಬೆಳೆಸಿಕೊಂಡು ಜೀವನದ ಪರೀಕ್ಷೆ ಎದುರಿಸಿ ಯಶಸ್ಸುಗಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳ ಪರವಾಗಿ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಕಾಲೇಜು ನೀಡಿದ ಶಿಕ್ಷಣ, ಮಾರ್ಗದರ್ಶನ ಮತ್ತು ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಶ್ರೀಮತಿ ಸಂಧ್ಯಾ ಕೆ. ವಿ ಸ್ವಾಗತಿಸಿದರು, ಶ್ರೀ ಗಣಪತಿ ಭಟ್ಟ ಅವರು ವಂದಿಸಿದರೆ, ಕಾರ್ಯಕ್ರಮವನ್ನು ಶ್ರೀಮತಿ ಪೂಜಾ ಭಟ್ಟ ಅವರು ನಿರೂಪಿಸಿದರು. ಸಮಾರಂಭವು ಸಂತೋಷ ಮತ್ತು ಭಾವುಕತೆಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ನಾಗರಾಜ ಹೆಗಡೆ ಹಾಗೂ ಉಪ ಪ್ರಾಚಾರ್ಯರಾದ ಶ್ರೀಮತಿ ರಮ್ಯಾ ಸಭಾಹಿತ್, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರೀ ಸೇರಿದಂತೆ ಎಲ್ಲಾ ಭೋಧಕ ಭೋಧಕೇತರ ಸಿಬ್ಬಂದಿಗಳು ಹಾಜರಿದ್ದರು..
