ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ದಿನಾಂಕ 19-02- 2026ರಂದು ಸರ್ಕಾರಿ ಶ್ರೀರಾಮ ಪ್ರೌಢಶಾಲೆ ಜೋಯಿಡಾದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಸಲಾಯಿತು.
ವಿವಿಧ ವೃತ್ತಿಗಳ ಪ್ರಾತ್ಯಕ್ಷಿಕೆ, ವಿವಿಧ ಕೋರ್ಸ್ಗಳ ಕುರಿತು ಮಾಹಿತಿ ಪ್ರದರ್ಶಿಸಲಾಯಿತು. ದಿನೇಶ ಕುಮಾರ್ ಬೆಳ್ಳಣ್ಣನವರ್ ಅರಣ್ಯ ಅಧಿಕಾರಿಗಳು,ಪ್ರಕಾಶ ತಗಡಿನಮನಿ ಉಪನ್ಯಾಸಕರು,ಬಿ .ಜಿ .ವಿ. ಎಸ್. ಕಾಲೇಜ್, ಜೋಯಿಡಾ, ಶಶಿಕಾಂತ್ ಹೂಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು , ಜ್ಯೋತಿ ಗುಡೆ ಸಿ.ಆರ್ .ಪಿ.ಗಳು, ಪಾಂಡುರಂಗ ಪಟಗಾರ ಅಧ್ಯಕ್ಷರು, ಕ.ಸಾ.ಪ. ಜೋಯಿಡಾ, ಕಿರಣ ಕುಮಾರ ವೃತ್ತಿ ಮಾರ್ಗದರ್ಶಕರು, ಬಿ. ಆರ್. ಸಿ. ಜೋಯಿಡಾರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಗೆ ಎಸ್.ಎಲ್ಎಲ್ .ಸಿ ನಂತರ ಮುಂದೆ ಯಾವ ರೀತಿಯ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸೂಕ್ತವಾದ ಗುರಿಯನ್ನು ಆಯ್ಕೆ ಮಾಡಿಕೊಂಡು ಅದರಂತೆ ಅಧ್ಯಯನ ಮಾಡಬೇಕೆಂದು ಪ್ರೇರಣದಾಯಕವಾಗಿ ಮಾರ್ಗದರ್ಶನ ಮಾಡಿದರು. ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
