Banner Ad

ಸುದ್ದಿ ಕನ್ನಡ ವಾರ್ತೆ

. ಹಳಿಯಾಳ: ಯಲ್ಲಾಪುರ -ಹಳಿಯಾಳ ರಸ್ತೆ ಮಾರ್ಗದ ಭಾಗವತಿ ಸಮೀಪ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವೇಳೆ ಬಸ್‌ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಲ್ಲಿಸಿ, ಸಲಗ ಕಾಡಿನೊಳಗೆ ತೆರಳಿದ ನಂತರವೇ ಸಂಚಾರ ಮುಂದುವರಿಸಿದ್ದಾರೆ.

Banner Ad

ಅದೇ ರೀತಿ, ನಾಲೈದು ದಿನಗಳ ಹಿಂದೆ ಬೊಮ್ಮನಹಳ್ಳಿ-ಅಂಬಿಕಾನಗರ ರಸ್ತೆಯಲ್ಲಿ ಪ್ರವಾಸಿಗರ ವಾಹನ ಹಾಗೂ ಬಸ್ ಮುಂದೆ ಒಂಟಿ ಸಲಗ ನಿಂತು ಭೀತಿ ಉಂಟುಮಾಡಿದ್ದ ಘಟನೆ ವರದಿಯಾಗಿತ್ತು.ಭಾಗವತಿ ಬಳಿ ಕಾಣಿಸಿಕೊಂಡ ಈ ಆನೆ ರಸ್ತೆ ಪಕ್ಕದಲ್ಲೇ ನಿಂತಿದ್ದು ಕೆಲವು ಸಮಯ ಆತಂಕ ತಂದೊಡ್ಡಿತು.

ರಸ್ತೆಯಲ್ಲಿ ನಿಂತಿದ್ದರಿಂದ ಬಸ್ ಗಳು, ಇತರೆ ವಾಹನಗಳು ದೂರದಲ್ಲೇ ನಿಲ್ಲಿಸಬೇಕಾಯಿತು. ಕೆಲವರು ಆನೆ ಇದ್ದರೂ ಲೆಕ್ಕಿಸದೇ ವಾಹನ ಚಲಾಯಿಸಿದ್ದು ಆನೆ ಬೆದರಿ ದಾಳಿಗೆ ಮುಂದಾಗಿತ್ತು.

ಇನ್ನು ಈ ಭಾಗದಲ್ಲಿ ಹಲವು ಆನೆಗಳಿವೆ.ಆದರೆ ಬಹುತೇಕ ಆನೆಗಳು ರಾತ್ರಿ ಅಥವಾ ಮುಂಜಾನೆ ಈ ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚಾರ ಮಾಡುತ್ತವೆ.

ಆದರೆ ಈ ಒಂಟಿ ಸಲಗ ಹಲವು ದಿನದಿಂದ ಜನವಸತಿ ಸ್ಥಳಗಳತ್ತ ಬರುತಿದ್ದು ಅರಣ್ಯ ಇಲಾಖೆಯವರು ಈ ಆನೆಯನ್ನ ಮರಳಿ ಕಾಡಿಗೆ ಅಟ್ಟಬೇಕು ಎಂಬುದು ಸ್ಥಳೀಯರ ಆಗ್ರಹ.ವಿಶೇಷವಾಗಿ ಈ ಭಾಗದಲ್ಲಿ ಬರುವ ಪ್ರವಾಸಿಗರಿಗೆ ಹಾಗೂ ವಾಹನ ಚಾಲಕರಿಗೆ ಅರಣ್ಯ ಇಲಾಖೆಯಿಂದ ವಿಶೇಷ ಸೂಚನೆ ನೀಡಲಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನಿಲ್ಲಬಾರದು. ಪೋಟೋ ಅಥವಾ ವಿಡಿಯೋ ತೆಗೆದುಕೊಳ್ಳುವ ನೆಪದಲ್ಲಿ ಆನೆಗಳನ್ನು ಪ್ರಚೋದಿಸಬಾರದು ಅರಣ್ಯ ಇಲಾಖೆಯವರು ಎಚ್ಚರಿಕೆಯನ್ನು ವಹಿಸುವಂತೆ ಮನವಿ ಮಾಡಿದ್ದಾರೆ.

Banner Ad