ಸುದ್ದಿ ಕನ್ನಡ ವಾರ್ತೆ
. ಕಾರವಾರ: ವಂದೇ ಮಾತರಂಗೆ
150 ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026 ರ ಯಾರ್ಲಿಗೆ ಕಾರವಾರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಸುಮಾರು 50 ರಷ್ಟು ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್ಎಫ್ ಸಿಬ್ಬಂದಿಗಳು ಭಾಗವಹಿಸಿದ್ದು, ಈ ತಂಡವು ಜನವರಿ 28 ರಂದು ಗುಜರಾತ್ನ ಲಖ್ಪತ್ ಕೋಟೆಯಿಂದ ತಮ್ಮ ಯಾರ್ಲಿಯನ್ನು ಪ್ರಾರಂಭಿಸಿದ್ದು, ಸೋಮವಾರ ಮಡಗಾಂವ್-ಕಾಣಕೋಣ-ಮಾಜಾಳಿ ಮೂಲಕ ಕಾರವಾರ ಪ್ರವೇಶಿಸಿತು. ಗಡಿಭಾಗದಲ್ಲಿ ಸಿಎಸ್ಎಸ್ಎಫ್ ಕೈಗಾದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು,ಎನ್.ಸಿ.ಸಿ ವಿದ್ಯಾರ್ಥಿಗಳು ಪೊಲೀಸ್ ಬ್ಯಾಂಡ್ ಮತ್ತು ಸ್ಥಳೀಯ ಜಾನಪದ ಕಲಾತಂಡಗಳು ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು. ಸೈಕ್ಲೋಥಾನ್ ತಂಡದಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿಗಳಿಗೆ ಗೋಟೆಭಾಗ್ ಕ್ರಾಸ್ನಲ್ಲಿ ಮೀನುಗಾರ ಮಹಿಳೆಯರು ತಿಲಕವಿಟ್ಟು, ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.
ಕೋಸ್ಟಲ್ ಸೈಕ್ಲೋಥಾನ್ನಲ್ಲಿ ಭಾಗವಹಿಸಿದ್ದ ಸಿಐಎಸ್ಎಫ್ ಕಾನಸ್ಟೇಬಲ್ ರಾಹುಲ್ ಮಾತನಾಡಿ, ಗುಜರಾತನಿಂದ ಪ್ರಾರಂಭವಾದ ನಮ್ಮ ಯಾರ್ಲಿಯು ಕೇರಳದ ಕೊಚ್ಚಿ ತನಕ ನಡೆಯಲಿದೆ. ಈ ಯಾರ್ಲಿ ಮುಖ್ಯ ಉದ್ದೇಶ ಸುರಕ್ಷಿತ ಸಮೃದ್ದ ಭಾರತ.ಕರಾವಳಿ ತೀರ ಪ್ರದೇಶ ಎಲ್ಲಿಯವರೆಗೆ ಸುರಕ್ಷಿತವಾಗಿರತ್ತೋ ಅಲ್ಲಿಯವರೆಗೆ ಭಾರತ ಸಮೃದ್ಧವಾಗಿರುತ್ತದೆ. ದೇಶದ ಮೀನುಗಾರರು ಸಹಕಾರ ಮಹತ್ವದಾಗಿದ್ದು, ಪ್ರತಿ ಕ್ಷಣ ಅವರು ಸಮುದ್ರದಲ್ಲಿ ಇರುವುದರಿಂದ ಕರಾವಳಿ ತೀರ ಪ್ರದೇಶದ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದ್ದು, ಅವರ ಜೊತೆ ಬೆರೆತು ದೇಶದ ಭದ್ರತೆಗೆ ಅವರ ಸಹಕಾರ ಪಡೆಯಲುಸೈಕ್ಲೋಥಾನ್ ಆಯೋಜಿಸಲಾಗಿದೆ,ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು(ಸಿಐಎಸ್ಎಫ್) ದೇಶದ ಪ್ರಮುಖ ನಿರ್ಣಾಯಕ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದರು. ಸಿಐಎಸ್ಎಫ್ ಘಟಕ ಎನ್.ಪಿ.ಸಿ. ಕೈಗಾದ ಸೀನಿಯರ್ ಕಮಾಂಡೆಂಟ್ ಅಜಯ ಕುಮಾರ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ, ಡಿವೈಎಸ್ಪಿ ಗಿರೀಶ ಮತ್ತಿತರರು ಭಾಗವಹಿಸಿದ್ದರು.
