ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಗ್ರಾಮ ಪಂಚಾಯತಗಳ ಅಧಿಕಾರಾವಧಿ ಮುಗಿದರೂ ಕೆಲವರ ಸಮಾಜ ಸೇವೆ ನಿರಂತರ ಚಾಲ್ತಿಯಲ್ಲಿರುತ್ತದೆ.
ಅದಕ್ಕೆ ಉದಾಹರಣೆಯಾಗಿ ಉಮ್ಮಚಗಿ ಗ್ರಾಮಪಂಚಾಯತ ಮಾಜಿ ಅಧ್ಯಕ್ಷರಾದ ಕುಪ್ಪಯ್ಯ ಪೂಜಾರಿಯವರ ದಿನಚರಿಯನ್ನೇ ಗಮನಿಸಬಹುದು. ಶನಿವಾರ ಬೆಳಿಗ್ಗೆ ಜಡ್ಡಿಗದ್ದೆಯ ಲಲಿತಾ ನಾರಾಯಣ ಸಿದ್ದಿ ತೀರಾ ಅಸ್ವಸ್ಥರಾಗಿ ತಕ್ಷಣ ಹುಬ್ಬಳ್ಳಿ ಕಿಮ್ಸ್ ಗೆ ಹೋಗಬೇಕಾಗಿರುವುದನ್ನು ಗಮನಿಸಿ, ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟರು. ನಂತರ ಯಲ್ಲಾಪುರ ಸಿರ್ಸಿ ರಸ್ತೆಯ ಉಮ್ಮಚಗಿ ಬ್ಯಾಂಕ್ ಎದುರಿಗಿನ ಹಂಪ್ಗೆ, ಜೋರಾಗಿ ಹೋಗುವ ವಾಹನ ಸವಾರರು ಅಪಘಾತಕ್ಕೀಡಾಗಬಾರದೆಂಬ ಕಳಕಳಿಯಿಂದ ಬಣ್ಣ ಬಳಿಯುವ ಕಾರ್ಯ ಮಾಡಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಪೂಜಾರಿ, ಗ.ರಾ.ಭಟ್ಟ, ಅನ್ವರ್ ಮೊದಲಾದವರು ಜೊತೆಯಲ್ಲಿದ್ದರು.
