ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ದಾಬೋಲಿಂ ವಿಮಾನ ನಿಲ್ದಾಣವು ಎಂದಿಗೂ ಕೂಡ ಬಂದ್ ಆಗುವುದಿಲ್ಲ. ಈ ವಿಷಯದ ಮೇಲೆ ವಿರೋಧಿಗಳು ಕೇವಲ ರಾಜಕೀಯ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಗೋವಾ ಕಾಂಗ್ರೇಸ್ ಸಂಸದ ವಿರಿಯಾಟೊ ಫರ್ನಾಂಡಿಸ್ ರವರ ಹೇಳಿಕೆಗೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್ ತಮ್ಮ ರಾಜಕೀಯ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿ- ಗೋವಾ ದಾಬೋಲಿಂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಅಭಿವೃದ್ಧಿಗೆ ಸರ್ಕಾರವು ಹೆಚ್ಚು ಹಣ ಖರ್ಚು ಮಾಡುತ್ತಿದೆ. ಒಂದು ವೇಳೆ ಈ ವಿಮಾನ ನಿಲ್ದಾಣ ಬಂದ್ ಆಗುವುದಾಗಿದ್ದರೆ ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ. ಸರ್ಕಾರವು ದಾಬೋಲಿಂ ವಿಮಾನ ನಿಲ್ದಾಣದ ಮುಂಭಾಗದಲ್ಲಿ 545 ಖರ್ಚು ಮಾಡಿ ಪ್ಲೈ ಓವರ್ ನಿರ್ಮಾಣ ಮಾಡುತ್ತಿದೆ. ಕಳೆದ 5 ವರ್ಷಗಳಲ್ಲಿ ನಾಗರೀಕ ವಿಮಾನಯಾನ ಮಂತ್ರಾಲಯವು ವಿಮಾನ ನಿಲ್ದಾಣದ ಆಧುನಿಕರಣಕ್ಕಾಗಿ 300 ರಿಂದ 400 ಕೋಟಿ ರೂ ಖರ್ಚು ಮಾಡಿದೆ. ಇದರಿಂದಾಗಿ ಈ ವಿಮಾನ ನಿಲ್ದಾಣ ಬಂದ್ ಮಾಡಲಾಗುವುದು ಎಂಬುದು ಸಂಪೂರ್ಣ ಸುಳ್ಳು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
