ಸುದ್ದಿ ಕನ್ನಡ ವಾರ್ತೆ
ಗುರು ಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದಿಂದ ಹಿರೇಬಾಗೇವಾಡಿಯ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾ ಲಿಂ ಮಹಾಸಭಾದ ಬೆಳಗಾವಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀ ಬಿ ಜಿ ವಾಲಿಇಟಗಿ ಅವರು ವಹಿಸಿ ಬಸವಾದಿ ಶರಣರ ವಚನಗಳಲ್ಲಿರುವ ಮೌಲ್ಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಸಿ ಎಂ ಬೂದಿಹಾಳ ಅವರು ಮಾತನಾಡಿ ಒಂಬತ್ತ ನೂರು ವರ್ಷಗಳ ಹಿಂದೆ ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಎಲ್ಲ ಕಾಯಕ ವರ್ಗದವರು ಸಮ ಸಮಾಜವನ್ನು ಕಟ್ಟಿ ಅನುಭವ ಅನುಭಾವದೊಂದಿಗೆ ಮಾನವನ ವಿಕಾಸಕ್ಕೆ ವಚನ ಸಾಹಿತ್ಯ ನೀಡಿದ್ದಾರೆ. ಅವುಗಳನ್ನು ಕಂಠಪಾಠ ಮಾಡುವುದರೊಂದಿಗೆ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಮಹಾಸಭಾದ ಜಿಲ್ಲಾ ಖಜಾಂಚಿ ಶ್ರೀ ಎಂ.ಎಂ ಬಾಳಿ, ಗುರು ಬಸವ ಬಳಗದ ಶ್ರೀ ಎನ್ ಎಫ್ ಉಪ್ಪೀನ, ಶ್ರೀ ಬಾಬಾಗೌಡ ಪಾಟೀಲ ಇದ್ದರು. ಪ್ರಾರಂಭದಲ್ಲಿ ಹಿರಿಯ ಗುರುಮಾತೆ ಶ್ರೀಮತಿ ಎಸ್ ಎಸ್ ಕಡೇಮನಿ ಸ್ವಾಗತಿಸಿದರು. ಶಿಕ್ಷಕ ಶ್ರೀ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮಕ್ಕಳು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
