ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದ ಸಭಾಭವನದಲ್ಲಿ 2021-26 ನೇ ಸಾಲಿನ ಅವಧಿಯ ಐದನೇಯ ವರ್ಷದ ಕೊನೆಯ ಸಾಮಾನ್ಯ ಸಭೆ ಶನಿವಾರ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಗಜಾನನ ಸಾವರಕರ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಗ್ರಾಮ ಪಂಚಾಯತದ ಆರೋಗ್ಯ ಕರ ವಸೂಲಾತಿಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ,ಕಿರಿಯ ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ, ಅಂಗನವಾಡಿಗಳಿಗೆ ಮಕ್ಕಳ ಗ್ರಾಮ ಸಭೆಯ ಶೈಕ್ಷಣಿಕ ವಸ್ತುಗಳ ಬೇಡಿಕೆಗೆ ಅನುಗುಣವಾಗಿ ವಿವಿಧ ವಸ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಕುರಿತ ಪ್ರಾಸ್ತಾವಿಕ ನುಡಿಗಳನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರೇಯರವರು ಆಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಅರುಣ ದೇಸಾಯಿ ಪಂಚಾಯತ ವ್ಯಾಪ್ತಿಯ ಎಲ್ಲ ಇಲಾಖೆಗಳ, ಗ್ರಾಮಸ್ಥರ ಸಹಕಾರದಿಂದ ನಮ್ಮ ಪಂಚಾಯತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಮುಂದೆಯೂ ಇದೇ ರೀತಿಯ ಸಹಕಾರ ಇರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುಂದ ಪ್ರೌಢಶಾಲೆಯ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ,ಸಾರ್ವಜನಿಕರಾದ ಸದಾನಂದ ಉಪಾಧ್ಯ,ರೇಖಾ ಉಪಾಧ್ಯ,ಕರ್ಕಮನೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ ಭಾಗ್ವತ,ಸುಕನ್ಯಾ ದೇಸಾಯಿ, ಭುವನೇಶ್ವರ ಮೇಸ್ತಾ , ನಂದಿಗದ್ದೆ ಗ್ರಾಮ ಪಂಚಾಯತದ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪಂಚಾಯತ ಅಧ್ಯಕ್ಷರ,ಉಪಾಧ್ಯಕ್ಷರ,ಸರ್ವ ಸದಸ್ಯರ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ದಾಕ್ಷಾಯಣಿ ದಾನಶೂರ,ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಸುಮನಾ ಹರಿಜನ,ಶೋಭಾ ಎಲ್ಲೇಕರ,ಗುಂದ ಪ್ರೌಢಶಾಲೆಯ ಶಿಕ್ಷಕರಾದ ಬಸವರಾಜ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಭುವನೇಶ್ವರ ಮೇಸ್ತಾ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಲಾ ಉಪಾಧ್ಯ,ಗುಂದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ವಿದ್ಯಾ ನಾಯ್ಕ,ಕರ್ಕಮನೆ ಶಾಲೆಯ ಅರ್ಚನಾ ಪೇರೆರಾ,ಅಂಗನವಾಡಿ ಕಾರ್ಯಕರ್ತೆಯರಾದ ಜೋಸಿನಾ ಎಫ್,ಪಿವನಾ ವಾಜ್,ಸತ್ಯವತಿ ದೇವದಾಸ,ಮಮತಾ ಬಾಂದೇಕರ, ಪೆರಪೇತ್ ಪೇರೆರಾ ಇನ್ನಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಗ್ರಾಮ ಪಂಚಾಯತ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳಿಂದ ಪಂಚಾಯತ ಜನಪ್ರತಿನಿಧಿಗಳನ್ನು ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಮನವೆಲ್ಲ ಎಫ್,ನಾರಾಯಣ ಬಾಂದೇಕರ,ಪರಮೇಶ್ವರ ಸಿದ್ದಿ,ಮಂಜುನಾಥ ಮಿರಾಶಿ, ಕ್ಲೇವನ್,ಪುಲೋರಿನ ಗೊಮ್ಸ್ , ರಜತ್ ಸಹಕಾರ ನೀಡಿದರು.ಕೊನೆಯಲ್ಲಿ ಪಂಚಾಯತ ಕಾರ್ಯದರ್ಶಿಗಳಾದ ಗಜಾನನ ಸಾವರಕರ ವಂದಿಸಿದರು.