ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ವೆಸ್ಟ್ ಕೊಸ್ಟ್ ಪೇಪರ್ ಮಿಲ್ಸ್ ಲಿ. ದಾಂಡೇಲಿ, ವಿಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರ, ಧಾರವಾಡ ಇವರ ಸಹಯೋಗದೊಂದಿಗೆ (ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಶಾಖೆ ಧಾರವಾಡ) 12 ವರ್ಷದೊಳಗಿನ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನ ರಂಗನಾಥ ಆಡಿಟೋರಿಮ್ ನಲ್ಲಿ ಫೆ. 08 ರಂದು ಭಾನುವಾರ ಆಯೋಜಿಸ ಲಾಗಿದೆ ಎಂದು ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಧಾರವಾಡದ ಖ್ಯಾತ ವೈದ್ಯರಾದ ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ 20 ಮಕ್ಕಳ ತಜ್ಞ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸುತಿದ್ದು, ದಾಂಡೇಲಿ ಹಾಗು ತಾಲ್ಲೂಕಿನ ಸುತ್ತಮುತ್ತಲಿನ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು, ಹಾಗೆ ಮಕ್ಕಳನ್ನು ಕರೆ ತರಲು ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಶಿಬಿರವು ಬೆಳಿಗ್ಗೆ 8.30 ಗಂಟೆಯಿಂದ ಮದ್ಯಾನ್ಹ 3.00 ಗಂಟೆಯವರೆಗೆ ನಡೆಯಲಿದೆ. ಚಿಕಿತ್ಸೆಗೆ ಬರುವ ಮಕ್ಕಳ. ಪೋಷಕರು ಅಂದು ಬೆಳಿಗ್ಗೆ 8.00 ಗಂಟೆಗೆ ಚಿಕೆತ್ಸೆ ನಡೆಯುವ ಸ್ಥಳದಲ್ಲಿ ನೋಂದಣಿ ಮಾಡಿಸಿಕೊಂಡು ಚಿಕಿತ್ಸೆಗೆ ಹಾಜರಾಗಬೇಕೆಂದು ತಿಳಿಸಿದರು.
ಡಾ. ಜ್ಞಾನದೀಪ್ ಗಾಂವ್ಕರ್ ರವರು ಮಾತನಾಡಿ ದಾಂಡೇಲಿಯಲ್ಲಿ ಲಭ್ಯರಿಲ್ಲದಂತಹ ನುರಿತ ತಜ್ಞ ವೈದ್ಯರು ಈ ಶಿಬಿರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷದಿ ವಿತರಿಸಲಿದ್ದಾರೆ. ಹಾಗೆ ಹೆಚ್ಚಿನ ಚಿಕಿತ್ಸೆ ಬೇಕಾದ ಮಕ್ಕಳಿಗೆ ಧಾರವಾಡ ಅಥವಾ ಹುಬ್ಬಳ್ಳಿ ಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ತಪ್ಪದೆ ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಜಿ.ಆರ್ ಇದ್ದರು.
