ಸುದ್ದಿ ಕನ್ನಡ ವಾರ್ತೆ

ಬೈಲಹೊಂಗಲ ತಾಲೂಕಿನ ನವಲ್ಗಟ್ಟಿ ಯ ಭಕ್ತ ಸಮೂಹ ದವರುಗುಂದ ದ ಮರಡಾ ದಲ್ಲಿ ನಡೆಸುತ್ತಿರುವ ಅನ್ನ ದಾಸೋಹ, ಉಳವಿ ಜಾತ್ರೆಗೆ ಹೋಗುವ ಪ್ರಯಾಣಿಕರು, ಭಕ್ತ ಸಮೂಹ ದವರಿಗೆ ತುಂಬಾ ಆಸರೆ ಯಾಗಿದೆ ಮತ್ತು ಅಪಾರ ಜನಪ್ರಿಯತೆ ಪಡೆಯುತ್ತಿದೆ .

ಕಳೆದ ಐದು ವರ್ಷ ಗಳಿಂದ ಜಾತ್ರೆಗೆ ಬರುವ ಭಕ್ತರ ಅನುಕೂಲ ಕ್ಕೆ ಎಂದು ಕಿತ್ತೂರು ತಾಲೂಕಾ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರು ಬೈಲ್ ಹೊಂಗಲ್ ತಾಲೂಕಿನ ನವಲ್ಗಟ್ಟಿ ಗ್ರಾಮ ದ ಗಣ್ಯರು ಆದ ರುದ್ರಗೌಡ ಎಸ್ ಪಾಟೀಲ್ಅನ್ನ ದಾಸೋಹ ವನ್ನು ಇಲ್ಲಿ ನಡೆಸುತ್ತಿದ್ದಾರೆ,ಸುತ್ತ ಮುತ್ತಲಿನ ಜನತೆಯ ಸಹಕಾರ ಅವರಿಗೆ ದೊರೆತಿದೆ ವಿಶೇಷ ವಾಗಿ ಸ್ಥಳೀಯ ರಾದ ಎನ್ ಆರ್ ಭಾಗ್ವತ್, ಶ್ರೀ ಕೃಷ್ಣ ವೇಲಿಪ್, ರವಿಕುಮಾರ್, ನಾರಾಯಣ ವೇಳಿಪ್ ಇತರರು ನಿರಂತರ ವ್ಯವಸ್ಥೆಗೆ ತಮ್ಮ ಮನೆಯ ಆವರಣದಲ್ಲಿ ಕೂಡ ಜಾಗ ನೀಡಿದ್ದಾರೆ ನೀರು ಪೂರೈಕೆ ಮಾಡುತ್ತಿದ್ದಾರೆ, ಪ್ರತಿದಿನವೂ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ, ಚಕ್ಕಡಿ ಗಳ ಮೂಲಕ, ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದು, ಹಸಿವು, ನೀರಡಿಕೆ ನೀಗಿಸುವ ಕಾಯಕ ವನ್ನು ಈ ಪಾಟೀಲ್ ಮಿತ್ರ ಮಂಡಳಿ ಮಾಡುತ್ತಿದೆ, ಕಳೆದ 29 ರಿಂದ ನಿರಂತರ ವಾಗಿ ಹಗಲು ರಾತ್ರಿ, ಊಟ ತಿಂಡಿ ಗಳನ್ನು ಪೂರೈಸುತ್ತಿರುವ ಈ ದಾಸೋಹ ದ ಕರೆಯ ಮೇರೆಗೆ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು ವಿವಿಧ ಗ್ರಾಮ ಗಳ ಜನತೆ ದಾಸೋಹಕ್ಕೆ ಭೇಟಿ ನೀಡಿ ಪ್ರಸಾದ ಪಡೆದು ಪಾಟೀಲ್ ಮಿತ್ರ ಮಂಡಳಿಯ ಕಾರ್ಯಕ್ಕೆ ಸದಾ ಯಶಸ್ಸು ಸಿಗಲೆಂದು ಪ್ರಾರ್ಥಿಸಿದರು .

ಇಂದು ನಾಳೆ ಕೂಡ ಸಾಕಷ್ಟು ಹೆಚ್ಚಿನ ಜನತೆ ಬರುವ ನಿರೀಕ್ಷೆಯಲ್ಲಿ ದಾಸೋಹದ ಕಾರ್ಯಕರ್ತರು ಇದ್ಫು ತಯಾರಿಯಲ್ಲಿದ್ದಾರೆ, ಈಗಾಗಲೇ ಪ್ರತಿ ದಿನವೂ ಸಾವಿರಾರು ಭಕ್ತರಿಗೆ ದಾಸೋಹ ನೀಡಿದ ತೃಪ್ತಿ ಪಾಟೀಲ್ ಪಾರಿವಾರಕ್ಕೆ ಇದೆ.