ಸುದ್ದಿ ಕನ್ನಡ ವಾರ್ತೆ
ಕೇಂದ್ರ ಬಜೆಟ್ 2026–27 ಕರ್ನಾಟಕದ ಪಾಲಿಗೆ ತೀವ್ರ ನಿರಾಶೆ ಮೂಡಿಸುವ ಹಾಗೂ ಅಸಮಂಜಸ ಬಜೆಟ್ ಆಗಿದೆ.ದೇಶದ ಆರ್ಥಿಕತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕವನ್ನು ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಅರ್ಥಪೂರ್ಣ ಅಥವಾ ನಿರ್ದಿಷ್ಟ ಘೋಷಣೆಗಳಿಲ್ಲದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಶಾಸಕ ಆರ್ ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ವಾಸ್ತವದಲ್ಲಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಕಡಿಮೆ ಪ್ರತಿಫಲ ನೀಡುವ ಭೇದಭಾವದ ನೀತಿಯನ್ನು ಅನುಸರಿಸುತ್ತಿರುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.ತೆರಿಗೆ ಹಂಚಿಕೆಯ ಅಚಲ ಚೌಕಟ್ಟು ಹಾಗೂ ಅಗತ್ಯ ತಿದ್ದುಪಡಿ ಕ್ರಮಗಳ ಕೊರತೆ ಕರ್ನಾಟಕದ ಮೇಲಿನ ಕೇಂದ್ರದ ಮಲತಾಯಿ ಧೋರಣೆಯನ್ನು ಬಹಿರಂಗಪಡಿಸುತ್ತದೆ ಇಂದು ಪ್ರಸಕ್ತ ಕೇಂದ್ರ ಬಜೆಟ್ ಕುರಿತಂತೆ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಈ ಬಜೆಟ್ ಪಕ್ಷಪಾತಪೂರ್ಣ ಹಾಗೂ ರಾಜಕೀಯ ಪ್ರೇರಿತವಾಗಿದ್ದು, ಕರ್ನಾಟಕದ ಜನರ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.ದೇಶದ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ನ್ಯಾಯಸಮ್ಮತಕ್ಕೆ ಅರ್ಹವಾಗಿದೆ.ಆದ್ದರಿಂದ ಕೇಂದ್ರದ ಈ ಬಜೆಟ್ ಅನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಅಸಮತೋಲನವನ್ನು ತಕ್ಷಣವೇ ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಶಾಸಕ ಆರ್ ವಿ ದೇಶಪಾಂಡೆ ಬಜೆಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
