ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಶ್ರೀ ಸೋಮೇಶ್ವರ ದೇವರ ಜಾತ್ರಾ ಉತ್ಸವ ದಿನಾಂಕ:20/02/2026 ರ ಶುಕ್ರವಾರ ನಡೆಯಲಿದೆ.
ಕಾರ್ಯಕ್ರಮದ ನಿಮಿತ್ಯ ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ,ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ನಡೆಯಲಿದ್ದು ಎಲ್ಲ ಭಕ್ತ ವೃಂದದವರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಮಧ್ಯಾಹ್ನ 1:00 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ಅನ್ನಸಂತರ್ಪಣೆ, ರಾತ್ರಿಯ ವೇಳೆ ಶ್ರೀ ದೇವರ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ ಸೋಮೇಶ್ವರ ರಂಗ ಮಂದಿರದಲ್ಲಿ ನಡೆಯಲಿದೆ.ರಾತ್ರಿ 11:00 ಗಂಟೆಗೆ ಶ್ರೀ ಸೋಮೇಶ್ವರ ನಾಟ್ಯ ಮಂಡಳಿ ಅವುರ್ಲಿಯ ಕಲಾವಿದರಿಂದ ಶ್ರೀ ಡಿ ಆರ್ ಪೂಜಾರ ವಿರಚಿತ ಹಣೆ ಬರಹಕ್ಕೆ ಹೊಣೆ ಯಾರು ಅರ್ಥಾತ್ ಹೆಣ್ಣಿಗೆ ಶೀಲ ಸಿಂಗಾರ,ಗಂಡಿಗೆ ಬುದ್ಧಿ ಬಂಗಾರ ಎಂಬ ಸುಂದರ ಸಾಮಾಜಿಕ,ಕೌಟುಂಬಿಕ ನಾಟಕದ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸೋಮೇಶ್ವರ ಟ್ರಸ್ಟ್ ಕಮಿಟಿ ಅವುರ್ಲಿ ಹಾಗೂ ಊರ ನಾಗರಿಕರು ವಿನಂತಿಸಿಕೊಂಡು, ಮಾರ್ಚ್ 07 2026 ರಿಂದ 09 ಮಾರ್ಚ್ 2026 ರವರಗೆ ಶ್ರೀ ದೇವರ ವಿನೂತನ ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಧ್ಯಮಕ್ಕೆ ತಿಳಿಸಿರುತ್ತಾರೆ.
