ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ಶಾಲಾ ಶೈಕ್ಷಣಿಕ ವಾತಾವರಣ ಅತ್ಯು ತ್ತಮವಾಗಿದೆ ಎನ್ನುವುದನ್ನು ಶಾಲೆಯ ಅಭಿವೃದ್ಧಿಯ ವಾರ್ಷಿಕವರದಿ ಸೂಚಿಸುತ್ತಿದೆ. ಪಿ. ಎಮ್. ಶ್ರೀ. ಶಾಲೆಯಲ್ಲಿ ಸಿಗುಮ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಶಿಕ್ಷಣದ ಲಾಭ ಪಾಲಕರು ಪಡೆದುಕೊಳ್ಳಬೇಕೆಂದು ಜೋಯಿಡಾ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ತಿಸಿಸಿದರು.
ಅವರು ಜೋಯಿಡಾ ಉನ್ನತಿಕರಿಸಿದ ಪಿ. ಎಮ್. ಶ್ರೀ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತಿದ್ದರು. ಮುಂಬರುವ ಅಂತಿಮ ಹಂತದ ಪರೀಕ್ಷೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿರೆಂದು ಹಾರೈಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ ಶ್ಯಾಮ ಪೋಕಳೆ ಮಾತನಾಡಿ, ಶಾಲೆಗೆ ಮಾಜಿ ಜಿ. ಪಂ. ಸದಸ್ಯ ರಮೇಶ ನಾಯ್ಕ ಅತ್ಯೂತ್ತಮ ಶಾಸ್ವತ ವೇದಿಕೆ ನಿರ್ಮಿಸಿ ಕೊಟ್ಟು ಮಕ್ಕಳ ಪ್ರತಿಭೆಗೆ ಪರೋಕ್ಷವಾಗಿ ಪ್ರೋತ್ಸಾಹಿದಕ್ಕೆ ಅಭಿನಂದಿಸುತ್ತೇವೆ. ಶಿಕ್ಷಕರ ನಿರಂತರ ಪ್ರಯತ್ನ ಶಾಲೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಕೆ. ಪಿ. ಸಿ. ಸದಸ್ಯ ಸದಾನಂದ ದಬಗಾರ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣದ ಈ ವೇದಿಕೆಯಲ್ಲಿ, ಪ್ರತಿಯನ್ನು ಕಣ್ತುಂಬಿಕೊಂಡು ಮಕ್ಕಳ ಸಾಧನೆಗೆ ಪ್ರೋತ್ಸಾಹಿಸೋಣ ಎಂದರು.
ಮುಖಂಡ ರವಿ ರೆಡ್ಕರ ಮಾತನಾಡಿ, ಜಾತ್ಯಾತೀತ, ಪಕ್ಷಾತೀತವಾಗಿ ಈ ವೇದಿಕೆಯಲ್ಲಿ ಹಿರಿಯರನ್ನು ಕರೆದು ಗೌರವಿಸಿದ್ದು ಮೆಮ್ಮೆಯ ಸಂಗತಿ. ಮುಂದೆಯೂ ಈ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದರು.
ವೇದಿಕೆಯಲ್ಲಿ ಗ್ರಾಮದ ಧಾರ್ಮಿಕ ಮುಖಂಡ ವಿನೋದ ಮಿರಾಶಿ, ಹಿರಿಯರಾದ ಆನಂದ ಪೋಕಳೆ, ಅರುಣ ದೇಸಾಯಿ, ಕೆ. ಎಲ್. ನಾಯ್ಕ, ಪಿ. ವಿ. ದೇಸಾಯಿ, ಮಾಬಳು ಕುಂಡಲ್ಕರ, ಗ್ರಾ. ಪಂ. ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಉಪಾಧ್ಯಕ್ಷ ಸಂತು ಮಂಥೇರೋ, ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ಕ. ಸಾ. ಪ. ಅಧ್ಯಕ್ಷ ಪಾಂಡುರಂಗ ಪಟಗಾರ, ಎಸ್. ಡಿ. ಎಮ್. ಸಿ. ಉಪಾಧ್ಯಕ್ಷೆ ಭವಾನಿ ಚವ್ಹಾಣ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಗೋಕುಳದಾಸ ನಾಯ್ಕ, ಶಾಲಾ ಸಮಿತಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳ ನೃತ್ಯ, ಸಂಗೀತ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯೂತ್ತಮ ಪ್ರತಿಭೆ ತೋರಿದ್ದು, ಪಾಲಕರ ಪ್ರಶಂಸೆಗೆ ಪಾತ್ರವಾಯಿತು.
ಮುಖ್ಯೋಪಾಧ್ಯಾಯ ಮಾದೇವ ಹಳದನಕರ ಅತಿಥಿಗಳಿಗೆ ಸ್ವಾಗತಿಸಿದರು. ಶಿಕ್ಷಕಿ ಹೂಲಿ ಕಾರ್ಯಕ್ರಮ ನಿರೂಪಿಸಿದರು, ಸುಧಾ ಹೆಗಡೆ ವಾರ್ಷಿಕ ವರದಿ ವಾಚನಮಾಡಿದರು, ವಾಣಿ ಹೆಗಡೆ ಮಕ್ಕಳ ಕಾರ್ಯಕ್ಲಮ ನಡೆಸಿಕೊಟ್ಟರು. ಅಧ್ಯಕ್ಷ ಶ್ಯಾಮ ಪೋಕಳೆಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಮಕ್ಕಳ ಸಾಂಸ್ಕೃತಿಕ ಹಬ್ಬವಾದಂತಾಗಿದ್ದು ಪಾಲಕರು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
