ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಚಾಪೇರ ಗ್ರಾಮದ ಶ್ರೀ ಸೋಮನಾಥ ದೇವರ ವಾರ್ಷಿಕೋತ್ಸವ ರವಿವಾರ ದಿನಾಂಕ:15-02-2026 ರಂದು ನಡೆಯಲಿದೆ. ಶ್ರೀ ಸೋಮನಾಥ ದೇವರ ವಾರ್ಷಿಕೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆ,ಮಹಾಭಿಷೇಕ,ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಜೆಯ ವೇಳೆ ಭಜನೆ,ನೃತ್ಯ ಕಾರ್ಯಕ್ರಮ, ಭಕ್ತರ ವಿಶೇಷ ಮನರಂಜನೆಗಾಗಿ ಸ್ಥಳೀಯ ಯುವ ಹಾಗೂ ಹಿರಿಯ ಕಲಾವಿದರ ಸಹಯೋಗದಲ್ಲಿ ದಿಲೆ ವಚನ ಯೆಲೆ ಮರಣ ಸಾಮಾಜಿಕ ಕೊಂಕಣಿ ನಾಟಕ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.