ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿಯವರು ಶಿವರಾತ್ರಿಯಂದು ಬೇಡ್ತಿ- ಗಂಗಾವಳಿ, ಅಘನಾಶಿನಿ, ಪಟ್ಟಣದ ಹೊಳೆ, ಶಾಲ್ಮಲಾ ನದೀ ತಟಗಳಲ್ಲಿ ಆಯಾ ಹಳ್ಳಿಗಳ ಜನರು ಒಗ್ಗೂಡಿ ನದಿ ಪೂಜೆ ನಡೆಸಬೇಕು. ಬೇಡ್ತಿ-ಅಘನಾಶಿನಿ ತಿರುವು ಯೋಜನೆಗಳನ್ನು ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಬೇಕು. ನದಿಗಳ ಉಳಿವಿಗೆ ಪ್ರಾರ್ಥನೆ ಸಲ್ಲಿಸಬೇಕು. ಹಾಡು, ಘೋಷಣೆ, ಚಿಕ್ಕ ಪಾದಯಾತ್ರೆ, ಚಿಕ್ಕ ಚಿಕ್ಕ ಸಭೆ, ಸಮಾವೇಶ ನಡೆಸಬೇಕು ಎಂದು ಸಂದೇಶ ನೀಡಿದ್ದಾರೆ.
ಈಗಾಗಲೇ ಸಹಸ್ರಲಿಂಗ, ಬಾಳೂರು ಸೇರಿದಂತೆ ನದೀ ಪೂಜೆಗೆ ತಯಾರಿ ನಡೆದಿದೆ. ಕುಮಟಾ ತಾಲೂಕಿನಲ್ಲೂ ಅಘನಾಶಿನಿ ನದಿ ಪೂಜೆ ನಡೆಸಲಿದ್ದೇವೆ” ಎಂದು ಸಂಚಾಲಕರು ಡಾ. ಸುರೇಶ ಹೆಗಡೆ ತಿಳಿಸಿದ್ದಾರೆ.
ಪೂಜ್ಯ ನೆಲೆಮಾವು ಮಠದ ಶ್ರೀಗಳು ನದೀ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಚಾಲಕ ಗೋಪಾಲಕೃಷ್ಣ ತಂಗರನೆ ತಿಳಿಸಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲಿ ಬೇಡ್ತಿ-ಗಂಗಾವಳಿ ನದೀ ಪೂಜೆಗೆ ಸಿದ್ಧತೆ ನಡೆಸಿದ್ದೇವೆ. ನದಿಯಲ್ಲೆ ನಿಂತು “ಬೇಡ್ತಿ ಬಿಡೆವು ಘೋಷಣೆ ಮಾಡಲಿದ್ದೇವೆ” ಎಂದು ಸಂಚಾಲಕ ನರಸಿಂಹ ಸಾತೊಡ್ಡಿ ತಿಳಿಸಿದ್ದಾರೆ. ಶಾಲ್ಮಲಾ ನದಿಗೆ ವಿಶೇಷ ಪೂಜೆಯನ್ನು ಪ್ರತಿವರ್ಷದಂತೆ ಶಿವರಾತ್ರಿಯಂದು ಪೂಜ್ಯ ಸ್ವರ್ಣವಲ್ಲಿ ಸ್ವಾಮೀಜಿ ಸಡೆಸಲಿದ್ದಾರೆ. ಸಂಜೆ ಸಹಸ್ರಲಿಂಗದಲ್ಲಿ ಅವರು ಶಾಲ್ಮಲಾ ಉಳಿಸಿ ಪೂಜಾ ಕಾರ್ಯಕ್ರಮದ ನೇತ್ರತ್ವ ವಹಿಸಲಿದ್ದಾರೆ. ಎಂದು ಸಂಚಾಲಕ ಅನಂತ ಹುಳಗೋಳ ತಿಳಿಸಿದ್ದಾರೆ.
ಶಿವರಾತ್ರಿಯಂದು ಬೇಡ್ತಿ ಗಂಗಾವಳಿ, ಅಘನಾಶಿನಿ ನದಿ ಪೂಜೆಗೆ ಸ್ವರ್ಣವಲ್ಲಿ ಶ್ರೀ ಕರೆ
