ಸುದ್ದಿ ಕನ್ನಡ ವಾರ್ತೆ

ನವದೆಹಲಿ:ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರನ್ನು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನಿಯೋಗದೊಂದಿಗೆ ಭೇಟಿಯಾಗಿ,​ಜಿಲ್ಲೆಯ ಪರಿಸರ ಮತ್ತು ಜನರ ಜೀವನೋಪಾಯಕ್ಕೆ ಪೂರಕವಲ್ಲದ ಯೋಜನೆಗಳ ಕುರಿತಾದ ಸಾರ್ವಜನಿಕರ ತೀವ್ರ ವಿರೋಧದ ಧ್ವನಿಯನ್ನು ಸಚಿವರಿಗೆ ಮನವರಿಕೆ ಮಾಡಿದರು.

ಆತಂಕ ಮತ್ತು ಅಹವಾಲುಗಳನ್ನು ಆಲಿಸಿದ ಸಚಿವರು ಈ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.ನಿಯೋಗದಲ್ಲಿ ಜಿಲ್ಲೆಯ ಶಾಸಕರುಗಳಾದ ಶಿವರಾಮ ಹೆಬ್ಬಾರ, ಭೀಮಣ್ಣಾ ನಾಯ್ಕ,ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿ,ಅನಂತ ಹೆಗಡೆ ಆಶೀಸರ ಇನ್ನಿತರ ಪ್ರಮುಖರು ಇದ್ದರು.