ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ತಾಲೂಕಿನಲ್ಲಿ
ಕರೋನಾ ಅವಧಿಯಿಂದ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ಳಾವರ ರೈಲು ಸೇವೆ ಇದೀಗ ಪುನರಾರಂಭವಾಗುತ್ತಿದ್ದು, ದಾಂಡೇಲಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನತೆಗೆ ಬಹು ನಿರೀಕ್ಷಿತ ಸೌಲಭ್ಯ ಮತ್ತೆ ಲಭ್ಯವಾಗಲಿದೆ.
ಈ ರೈಲು ಸೇವೆ ಪುನರಾರಂಭದಿಂದ ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ದಾಂಡೇಲಿ ಭಾಗದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಹೊಸ ವೇಗ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರೈಲು ಸೇವೆ ಆರಂಭೋತ್ಸವಕ್ಕೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ನಿರೀಕ್ಷಿಸಲಾಗಿದೆ.
ದಿನಾಂಕ: 07-02-2026 ರ ಶನಿವಾರ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಸಮಯ ಸಂಜೆ 3.30 ಗಂಟೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಗುವುದು.
ದಾಂಡೇಲಿ-ಅಳ್ಳಾವರ ರೈಲು ಮಾರ್ಗ ಪುನಶ್ಚೇತನಗೊಂಡಿರುವುದು ಪ್ರದೇಶದ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
