ಸುದ್ದಿ ಕನ್ನಡ ವಾರ್ತೆ
ಹಳಿಯಾಳ:ಜಿಲ್ಲಾಡಳಿತ,ಜಿಲ್ಲಾ
ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಹಳಿಯಾಳ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ,ಹಳಿಯಾಳ, ಸಮೂಹ ಸಂಪನ್ಮೂಲ ಕೇಂದ್ರ,ಮಂಗಳವಾಡ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅರ್ಲವಾಡ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಮಂಗಳವಾಡ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ 04 ಫೆಬ್ರುವರಿ 2026 ರ,ಬುಧವಾರರಂದು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅರ್ಲವಾಡದಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮಂಗಳವಾಡ ಕ್ಲಸ್ಟರಿನ ಮುಖ್ಯ ಶಿಕ್ಷಕರ,ಸಹ ಶಿಕ್ಷಕರ ವೃಂದ,ವಿದ್ಯಾರ್ಥಿಗಳು,ಅರ್ಲವಾಡ ಶಾಲೆಯ ಶಿಕ್ಷಕ ವೃಂದದವರು, ಪಾಲಕರು,ಪೋಷಕರು,ವಿದ್ಯಾರ್ಥಿಗಳ ಜೊತೆಗೆ ವಾದ್ಯಗಳೊಂದಿಗೆ ಹೆಜ್ಜೆ ಹಾಕಿ ಅರ್ಲವಾಡ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಮಾತೆಯರು ಗ್ರಾಮೀಣ ಅಲಂಕೃತ ಪೋಷಾಕುನೊಂದಿಗೆ ಪೂರ್ಣ ಕುಂಭ ಹೊತ್ತು,ಶಾರದಾ ಮಾತೆಯ ಭಾವಚಿತ್ರ ಹೊತ್ತ ಗಾಡಿಯ ಭವ್ಯವಾದ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ನಿರ್ಣಾಯಕರು ಸೇರಿದಂತೆ ಕಾರ್ಯಕ್ರಮದ ಗಣ್ಯರು ಒಳಗೊಂಡಂತೆ ಪಾಲಕರು,ಪೋಷಕರ ಸಮ್ಮುಖದಲ್ಲಿ ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಅಚಲ ಮತ್ತು ತನ್ವಿ ಸಂಗಡಿಗರು 7 ನೇಯ ತರಗತಿಯ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆ,ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛವನ್ನು ನೀಡುವುದರ ಮೂಲಕ ಅರ್ಲವಾಡ ಶಾಲೆಯ ಮುಖ್ಯ ಶಿಕ್ಷಕಿಯಾದ ಚಂದ್ರಕಲಾ ಎಫ್ ಮೇತ್ರಿ ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರ್ಲವಾಡ ಶಾಲೆಯ ಮುಖ್ಯ ಶಿಕ್ಷಕಿಯಾದ ಚಂದ್ರಕಲಾ ಎಫ್ ಮೇತ್ರಿ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ,ಸ್ವಾಗತ ಭಾಷಣ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳವಾಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಳಿಕರವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿ, ವಾರ್ಷಿಕ ಕ್ರಿಯಾ ಯೋಜನೆಯಂತೆ ಪ್ರತಿ ಕ್ಲಸ್ಟರಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಕಲಿಕೆಯ ಎಫ್ ಎಲ್ ಎನ್ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಒಟ್ಟು 7 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡುವುದು, ಆನಂದಮಯ ಕಲಿಕೆ,ಅಡಿಪಾಯ ಸಾಕ್ಷರತೆ, ಸೃಜನಾತ್ಮಕತೆ,ಸಮುದಾಯದ ಸಹಭಾಗಿತ್ವ,ಕಲಿಕಾ ಚೇತರಿಕೆಗೆ ಪ್ರೇರಣೆ ನೀಡುವುದೇ ಕಲಿಕಾ ಹಬ್ಬದ ಉದ್ದೇಶಗಳಾಗಿವೆ, ಕಲಿಕಾ ಹಬ್ಬ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉಪಸ್ಥಿತರಿದ್ದ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಳಿಯಾಳ ಸತೀಶ ನಾಯಕರವರು ಮಾತನಾಡಿ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು,ಕಲಿಕೆಯನ್ನು ಒತ್ತಡವಿಲ್ಲದ ಸಂತೋಷದಾಯಕ ಚಟುವಟಿಕೆಯಾಗಿ ಪರಿವರ್ತಿಸಲು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಲಾದ ಒಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮ ಇದಾಗಿದ್ದು,ಈ ಹಬ್ಬದಲ್ಲಿ ಮಕ್ಕಳು ಆಟಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸ್ವಯಂ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ.ಇದನ್ನು ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಪೂರಕವಾಗಿ,ಕಲಿಕಾ ಚೇತರಿಕೆಯ ಭಾಗವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಂಬಾಜಿ ದಡ್ಡಿರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜ್ಞಾನೇಶ್ವರ ಮಿರಜಕರ ಗ್ರಾಮ ಪಂಚಾಯತ ಸದಸ್ಯರು ಅರ್ಲವಾಡ,ಸಂತೋಷ ಗೌರಿ ಗ್ರಾಮ ಪಂಚಾಯತ ಸದಸ್ಯರು ಅರ್ಲವಾಡ,ರಾಧಾ ತಾಂಬಿಟಕರ ಉಪಾಧ್ಯಕ್ಷರು,ಎಸ್ ಡಿ ಎಂ ಸಿ,ಸದಸ್ಯರಾದ ನಾಗರಾಜ ಬಂಬರಗಿ,ಸರೋಜಾ ಮೇತ್ರಿ, ಆಪ್ರೀನ್ ಬಾನು ಹಳಬ,ಸಂಜು ಜುಂಜವಾಡಕರ,ಪರಶುರಾಮ ಗೋದಳಕರ,ರೇಖಾ ಚವ್ಹಾಣ,ಮಲ್ಲಸರ್ಜ ಹುಣಸಿಶೆಟ್ಟಿ,ಸಂತೋಷ ಡೇಫಿ,ನಾರಾಯಣ ಸುಳಗೋಕರ, ಮಂಜುನಾಥ ಬಿಡಕಾರ, ನಾಗರತ್ನಾ ಹಿರೇಮಠ, ಕೃಷ್ಣಾಬಾಯಿ ದಡ್ಡಿ,ಜಯರಾಮ ತಾಂಬಿಟಕರ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ರಮೇಶ ಜುಂಜವಾಡಕರ,ಪೂರ್ಣಿಮಾ ಬಿಡಕಾರ,ಅನಸೂಯಾ ಸಮಗೊಂಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅರ್ಲವಾಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅರ್ಲವಾಡ ಶಾಲೆಯ ಸಹ ಶಿಕ್ಷಕರಾದ ಶಿವಾನಂದ ಹಿರೇಮಠ ನಿರ್ವಹಿಸಿದರು,ಎಲ್ಲರಿಗೂ ವಂದನೆಯನ್ನು ಶಾಲೆಯ ಸಹ ಶಿಕ್ಷಕರಾದ ಕಾರ್ತಿಕ ಕೆ.ಕೆ ಸಲ್ಲಿಸಿದರು.
