ಸುದ್ದಿ ಕನ್ನಡ ವಾರ್ತೆ

ಭಾರತೀಯ ಜನತಾ ಪಾರ್ಟಿ ಹಳಿಯಾಳ ಮಂಡಲ ವತಿಯಿಂದ ಇಂದು ಹಳಿಯಾಳ ಮಂಡಲದಲ್ಲಿ VBG Ram ಗೆ ಜಾಗೃತಿ ಸಮಾವೇಶ ಹಾಗೂ ಸಂತ ಶ್ರೀರೋಮಣಿ ಶ್ರೀ ರವಿಧಾಸ್ ಜಯಂತಿ ಆಚರಣೆ ನಡೆಸಲಾಯಿತು ಈ ಸಂಧರ್ಭದಲ್ಲಿ VBG Ram G ಯೋಜನೆಯ ಸಾಧಕ ಭಾದಕ್ ಕುರಿತು ರಾಜ್ಯ ವಕ್ತಾರರು ಶ್ರೀ ಹರಿಪ್ರಕಾಶ್ ಕೋಣೆಮನೆ ಅವರು ಕೇಂದ್ರ ಸರ್ಕಾರದ ವಿಕಸಿತ ಭಾರತದ ನಿರ್ಮಾಣವೆ VBG Ram G ಯೋಜನೆಯ ಮೂಲ ಆಶಯ 2047 ನೇ ಇಸ್ವಿಯ್ ವಿಕಸಿತ ಭಾರತ ಪರಿಕಲ್ಪನೆ ಕುರಿತು ವಿವರವಾಗಿ ಯೋಜನೆಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತವಿಕವಾಗಿ ಮಂಡಲ ಪ್ರಭಾರಿ ಶ್ರೀ ನಿತ್ಯಾನಂದ ಗೌಂಕರ ಮಾತನಾಡಿದರು. ಶ್ರೀ ಎಸ್ ಎಲ್ ಘೋಟ್ನೆಕರ್ ಮಾಜಿ ಕೇಂದ್ರ ಸರ್ಕಾರದ ದೂರ ದ್ರಷ್ಟಿ ಪರಿಕಲ್ಪನೆ ಇಟ್ಟುಕೊಂಡು ಮಾಡಿರುವಂತ ಯೋಜನೆ VBG ram G ಯೋಜನೆ ಅಂತ ಮಾತನಾಡಿದರು. ಮಾಜಿ ಶಾಸಕರು ಶ್ರೀ ಸುನಿಲ್ ವಿ ಹೆಗಡೆ ಅವರು ಯೋಜನೆ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾಜಿ ನರಸಾನಿ, ಮಂಡಳ ಅಧ್ಯಕ್ಷರು ಶ್ರೀ ವಿಠ್ಠಲ್ ಸಿದ್ದಣ್ಣವರ, ಪ್ರದಾನ ಕಾರ್ಯದರ್ಶಿ ಶ್ರೀ ಸಂತೋಷ ಘಟಕಾಂಬ್ಳೆ, ಶ್ರೀ ವಿ ಎಂ ಪಾಟೀಲ್, ಜಿಲ್ಲಾ ವಿಶೇಷ ಆಹ್ವಾನಿತರು ಶ್ರೀ ಮಂಗೇಶ ದೇಶಪಾಂಡೆ, ಶ್ರೀ ಅನೀಲ್ ಮುತ್ನಾಳ್,ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರು ಶ್ರೀನಿವಾಸ್ ಘೋಟ್ನೆಕರ್, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಗಣಪತಿ ಕರೆಂಜೆಕರ, ಶ್ರೀಮತಿ ಸಂಗೀತ ಜಾವಳೆಕರ,ಶಾಂತಾ ಹಿರೇಕಾರ,ಶ್ರೀ ಯಲ್ಲಪ್ಪ ಹೊನ್ನುಜಿ, ಸೊನಪ್ಪ ಸುಣಕಾರ್, ಯೆಲ್ಲಪ್ಪ ಹೆಳವರ,ರಾಘವೇಂದ್ರ ಎನ್ ಸಿ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.