Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ಪುಣ್ಯ ಕ್ಷೆತ್ರ ಉಳವಿಯ ಶ್ರೀ ಚನ್ನ ಬಸವಣ್ಣ ನವರ ವಾರ್ಷಿಕ ಜಾತ್ರೆಯ ಮಹಾ ರಥೋತ್ಸವ ವಿಜೃಂಭಣೆ ಯಿಂದ ನಡೆಯಿತು.

Banner Ad

ಭಾರತ ಹುಣ್ಣಿಮೆಯ ಮಘಾ ನಕ್ಷತ್ರ ದ ಪಾಡ್ಯದ ಶುಭ ಗಳಿಗೆಯಲ್ಲಿ ಇಂದು ಮದ್ಯಾಹ್ನ 4 ಘಂಟೆಗೆ ಮಹಾ ರಥೋತ್ಸವ ಲಕ್ಷಾಂತರ ಜನರ ಜಯ ಘೋಷ ಗಳ ನಡುವೆ ನಡೆಯಿತು. ಕಳೆದ ಜನೆವರಿ 25 ರ ರಥ ಸಪ್ತಮಿ ಯಿಂದ ಆರಂಭ ಗೊಂಡ ಉಳವಿ ಜಾತ್ರೆ ಯಲ್ಲಿ ಇಂದು ಮಹಾ ರಥೋತ್ಸವ ನಡೆದರೂ ಇನ್ನೂ ಎರಡು ದಿನಗಳ ಕಾಲ ಜಾತ್ರೆಯ ವಿವಿಧ ಧಾರ್ಮಿಕ ಕಾರ್ಯಗಳು ನಡೆದು ನಂತರ ಜಾತ್ರೆ ಸಂಪನ್ನ ಗೊಳ್ಳಲಿದೆ.

ಸುಂದರ ರಥೋತ್ಸವ ಅಡಕೆಶ್ವರ ಮಡಕೇಶ್ವರ ಉಳವಿ ಚನ್ನ ಬಸವೇಶ್ವರ ಹರ ಹರ ಮಹಾ ದೇವ, ಎನ್ನುತ್ತಾ ಭಕ್ತರು ಮಹಾ ರಥ ವನ್ನು ರಥ ಬೀದಿಯಲ್ಲಿ ಎಳೆಯುವುದನ್ನು ನೋಡುವುದೇ ಒಂದು ಅದ್ಬುತ, ಅಷ್ಟು ಸುಂದರ ನೋಟವು ನಮ್ಮ ಕಣ್ಣು ತುಂಬಿಕೊಳ್ಳುತ್ತದೆ. ಲಕ್ಷಾಂತರ ಭಕ್ತರು ಬಸವಣ್ಣ ನ ಪೂಜೆ ಪುನಸ್ಕಾರ ಗಳನ್ನು ವಾರಗಳ ಕಾಲ ಸ್ಥಳದಲ್ಲಿ ನಡೆಸುವುದು ಸೇರಿದ ಜನತೆಗೆ ದಾಸೋಹ ನೀಡುವುದು ಒಂದು ಹೆಮ್ಮೆ ಇಂತ ಅದ್ಬುತ ಉಳವಿ ಜಾತ್ರೆಯ ವರ್ಣನೆ ಯನ್ನು ಎಷ್ಟು ಮಾಡಿದರೂ ಕಡಿಮೆಯೇ.. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೈಲಹೊಂಗಲ, ಹುಬ್ಬಳ್ಳಿ, ಸೇರಿದಂತೆ ಉತ್ತರ ಕರ್ನಾಟಕ ದ ಲಕ್ಷಾಂತರ ಜನರು ಗೋವಾ ಮಹಾರಾಷ್ಟ್ರ ರಾಜ್ಯ ಗಳಿಂದಲೂ ಬಂರುವ ಜನರು ಉಳವಿ ಯಲ್ಲಿ ಸೇರುತ್ತಾರೆ, ಚಕ್ಕಡಿ, ಟ್ರಾಕ್ಟರ್, ಟೆಂಪೋ, ಬಸ್ ಸೇರಿದಂತೆ ವಿವಿಧ ವಾಹನ ಗಳಲ್ಲಿ ಬರುತ್ತಾರೆ, ಉತ್ತರ ಕರ್ನಾಟಕ ದ ಭಕ್ತರು ಪಾದಯಾತ್ರೆ ಮೂಲಕ ನೂರಾರು ಕಿಲೋ ಮೀಟರ್ ನಡೆದು ಬರುವುದೇ ವಿಶೇಷ, ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳೂ ಕೂಡ ನಡೆದು ಬಂದಿದ್ದಾರೆ,

ದಾಸೋಹ ….. ಉಳವಿ ಜಾತ್ರೆಗೆ ಬರುವವರಿಗೆ ಈ ವರ್ಷ ದಾರಿಯ ಮದ್ಯೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅಲ್ಲಲ್ಲಿ ಅನ್ನ ದಾಸೋಹ ಗಳನ್ನು ಮಾಡಲಾಗಿತ್ತು, ಇದರಿಂದ ನಡೆದು ಬರುವವರು, ಚಕ್ಕಡಿಯಲ್ಲಿ ಬರುವವ ರಿಗೆ ತುಂಬಾ ಅನುಕೂಲ ವಾಗಿದೆ. ವಿಸ್ತಾರದ ರಥ ಬೀದಿ ..
ಕಳೆದ ವರ್ಷ ದಿಂದ ಉಳವಿ ರಥ ಬೀದಿ ತುಂಬಾ ವಿಸ್ತಾರ ವಾಗಿದೆ,ರೂಪಾಯಿ 4 ಕೋಟಿ ವೆಚ್ಚದಲ್ಲಿ ಸುಂದರ ರಥ ಬೀದಿ ನಿರ್ಮಾಣ ವಾಗಿದ್ದು ಭಕ್ತ ರಿಗೆ ಸರಳ ವಾಗಿ ಜನರ ಮದ್ಯೆ ಓಡಾಡಲು ಅನುಕೂಲ ವಾಗಿದೆ. ಸುಮಾರು 1400 ಚಕ್ಕಡಿ ಗಾಡಿಗಳು ಬಂದಿದ್ದು ಇದಕ್ಕೆಲ್ಲ ಉತ್ತರ ಕರ್ನಾಟಕ ದ ರೈತರ ಶ್ರಮದ ಭಕ್ತಿಯೇ ಕಾರಣ ಪ್ರೀತಿಯಿಂದ ಎತ್ತುಗಳನ್ನು ಪೂಜಿಸುವ ಅವರ ಭಕ್ತಿ ಮೆಚ್ಚುವಂತಹದು. ಒಟ್ಟಾರೆ ವಿವಿಧ ವಾಹನ ಗಳು ಸೇರಿ ಸುಮಾರು 20 ಸಾವಿರ ಕ್ಕಿಂತ ಹೆಚ್ಚು ವಾಹನ ಗಳು ಪಾರ್ಕಿಂಗ್ಆಗಿವೆ. ಸಾಕಷ್ಟು ದಾಸೋಹ ಗಳು. ಉಳವಿಯಲ್ಲಿ 20 ಕ್ಕೂ ಹೆಚ್ಚು ದಾಸೋಹಗಳು ಭಕ್ತರ ಹಸಿವನ್ನು ನೀಗಿಸುತ್ತಿವೆ. ಇನ್ನು ದಾರಿ ಮದ್ಯೆ ಕೂಡ ಅಲ್ಲಲ್ಲಿ ಹತ್ತಾರು ದಾಸೋಹ ಗಳು ಭಕ್ತರ ಹಸಿವನ್ನು ನೀಗಿಸುತ್ತಿವೆ. ಜಿಲ್ಲಾಧಿಕಾರಿ ಭೇಟಿ
ಜಾತ್ರೆಯ ಶುಭ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಲಷ್ಮಿ ಪ್ರಯಾ ಅವರು ಬೆಳಿಗ್ಗೆ ದೇವಸ್ಥಾನ ಕ್ಕೆ ಬಂದು ಶ್ರೀ ದೇವರ ಆಶೀರ್ವಾದ ಪಡೆದರು ನಂತರ ಅವರನ್ನು ಗೌರವಿಸಲಾಯಿತು. ಅವರು ರಥ ಬೀದಿಯಲ್ಲಿಸುತ್ತಾಡಿ ಅವಲೋಕಿಸಿದರು.

ಉಳವಿಯ ದೇವಸ್ಥಾನ ದ ಆಡಳಿತ ಮಂಡಳಿ ಅಧ್ಯಕ್ಷರು ಸಂಜಯ ಕಿತ್ತೂರ,ಉಪಾಧ್ಯಕ್ಷರು ಪ್ರಕಾಶ ಕಿತ್ತೂರ, ಸದಸ್ಯ ರಾದ ಗಂಗಾಧರ ಕಿತ್ತೂರ, ವಿರೇಶ ಕಂಬಳಿ,ಗ್ರಾಮ ಪಂಚಾಯತ ಅಧ್ಯಕ್ಷರು ಮಂಜುನಾಥ ಮೊಕಾಶಿ, ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಭಾರತಿ ಎನ್ ಮತ್ತು ಅನೇಕ ಗಣ್ಯರು ಇಂದಿನ ರಥ ಪೂಜೆಯಲ್ಲಿ ಭಾಗವಹಿಸಿ ರಥ ಕ್ಕೆ ಚಾಲನೆ ನೀಡಿದರು. ಲಕ್ಷಾಂತರ ಜನರು ಸೇರಿದ ಜಾತ್ರೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಆರೋಗ್ಯ ವ್ಯವಸ್ಥೆ ಗಳು ಮತ್ತು ಪೊಲೀಸ್ ವ್ಯವಸ್ಥೆ ಗಳು ಸಮಾಧಾನ ಕರ ವಾಗಿದ್ದವು, ಸ್ಥಳೀಯ ಸಿಪಿಐ ಚಂದ್ರಶೇಖರ್ ಹರಿಹರ, ಪಿಎಸ್ಐ. ಮಹೇಶ ಮಾಳಿ, ಮಹಿಳಾ ಪಿಎಸ್ಐ ಮಾದೇವಿ ನೈಕೋಡಿ ಸೇರಿದಂತೆ 26.ಪಿಎಸ್ಐ ಗಳು 300 ಪೊಲೀಸರು, 200 ಹೋಮ್ ಗಾರ್ಡ್ ಗಳು 150 ಸ್ವಯಂ ಸೇವಕರು ಉತ್ತಮ ವ್ಯವಸ್ಥೆ ಮಾಡಲಾಗಿತ್ತು ಇಲ್ಲದ ಮನರಂಜನೆ…… ಲಕ್ಷಾಂತರ ಜನರು ಸೇರಿದರೂ ಯಾವುದೇ ಮನರಂಜನೆ ಗಳು ಇರಲಿಲ್ಲ, ವಿವಿಧ ಆಕರ್ಷಣೆ ಯ ಅಂಗಡಿಗಳು ದನ ಕರುಗಳ ವೇಷ ಭೂಷಣ ಗಳು, ಬಂಡಾರ, ಕುಂಕುಮ, ಬೆಂಡು ಬತ್ತಾಸು ಗಳು, ಮಂಡಕ್ಕಿ ಕಾರಾ, ಅಂಗಡಿಗಳು, ತಂಪು ಪಾನಿಯ ಅಂಗಡಿಗಳು ಜನಾಕರ್ಷಣೆಯ ಕೇಂದ್ರ ಗಳಾಗಿದ್ದವು. 10 ಲೆಡ್ ಪರದೆ ಗಳು, ದ್ರೋಣ ಕೆಮರಾ, ವಾಚ್ ಟವರ್ ಗಳು ಜಾತ್ರೆಯಲ್ಲಿ ಮಕ್ಕಳಿಗೆ ವೇಳೆ ಕಳೆಯಲು ಅನುಕೂಲ ವಾದಂತೆ ಕಂಡು ಬಂದವು ಅವುಗಳ ಬಗ್ಗೆ ದೊಡ್ಡವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಆದರೆ ವಯಸ್ಸಾದವರು, ಇದರ ಪ್ರಯೋಜನ ಪಡೆದರು ಜನವೋ ಜನರು
ಉಳವಿ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು ಯಲ್ಲಾಪುರ ಕಡೆಯಿಂದ ಕಾರವಾರ ಅಣಶಿ ಕಡೆಯಿಂದ, ಜೋಯಿಡಾ ಬೆಳಗಾವಿ ಕಡೆಯಿಂದ ದಾಂಡೇಲಿ ಗುಂದ ಮಾರ್ಗದಿಂದ ಹೀಗೆ ಜನಸಾಗರವೇ ಎಲ್ಲೆಲ್ಲೂ ತುಂಬಿ ಜಾತ್ರೆಯ ಮೆರಗನ್ನು. ಹೆಚ್ಚಿಸಿದ್ದವು.
ಇನ್ನೆರಡು ದಿನ ಜಾತ್ರೆಯ ಗದ್ದಲ ಇದ್ದು ನಿದಾನವಾಗಿ ಜಾತ್ರೆ ಮುಗಿಯಲಿದೆ.

Banner Ad