ಸುದ್ದಿ ಕನ್ನಡ ವಾರ್ತೆ

. ಕುಮಟಾ:ತಾಲೂಕಿನ ರಾಷ್ಟೀಯ ಹೆದ್ದಾರಿಯ ರಸ್ತೆಯ 66 ರ ಮಾನೀರು ದೇವಸ್ಥಾನದ ಬಳಿ ಕೆ.ಎಸ್‌.ಆ‌ರ್.ಟಿಸಿ ಬಸ್ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೊಲೆರೋ ವಾಹನ ಚಾಲಕ ಹಾಗೂ ಬಸ್ ನಲ್ಲಿದ್ದ ಏಳು ಜನರಿಗೆ ಗಾಯವಾದ ಘಟನೆ ನಡೆದಿದೆ.

ಕಾರವಾರದ ಬೊಲೆರೋ ವಾಹನ ಚಾಲಕನಿಗೆ ಗಂಭೀರ ಗಾಯವಾಗಿದ್ದು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಗಾಯಾಳುಗಳಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಾರವಾರದಿಂದ ಕುಮಟಾಕ್ಕೆ ಬೊಲೆರೋ ವಾಹನದಲ್ಲಿ ಮೀನು ತುಂಬಿಕೊಂಡು ಹೋಗಿ, ಮೀನುಗಳನ್ನ ಡಂಪ್ ಮಾಡಿ ಕುಮಟಾದಿಂದ ಕಾರವಾರದ ಕಡೆ ಮರಳಿ ತೆರಳುತಿದ್ದು ಗೋಕರ್ಣದ ಕಡೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.