ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಯಂಗ್ ಸ್ಟಾರ್ ಯುಥ್ ಕ್ಲಬ್ ವತಿಯಿಂದ ಬಾಮಣೆಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೇರಿಯೆ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಬೋಂಡೇಲಿ ತಂಡವು (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆಯಿತು. ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ಡೇರಿಯೆ ಹಾಗೂ ಬೊಂಡೇಲಿ ತಂಡಗಳ ನಡುವಿನ ಪಂದ್ಯದಲ್ಲಿ ಡೇರಿಯೆ ತಂಡವು ಬೊಂಡೇಲಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.ಬೊಂಡೇಲಿ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ (ರನ್ನರ್ ಅಪ್ )ದ್ವಿತೀಯ ಸ್ಥಾನ ಪಡೆಯಿತು. ಡೇರಿಯೆ ತಂಡದಲ್ಲಿ ತುಷಾರ ಡೇರೆಕರ (ನಾಯಕ),ಅಖಿಲ್ ಡೇರೆಕರ,ನರೇಶ ಡೇರೆಕರ,ರಾಕೇಶ ಡೇರೆಕರ,ಸಂದೇಶ ಡೇರೆಕರ, ದಿವಾಕರ ಡೇರೆಕರ,ರೋಹಿತ ಡೇರೆಕರ,ದೀಲಿಪ ಡೇರೆಕರ,ರಂಜಿತ ಡೇರೆಕರ,ಅಜಯ ಡೇರೆಕರ, ಹೃಷಿಕೇಶ ಡೇರೆಕರ,ನಿವಾಸ ಡೇರೆಕರ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ಡೇರಿಯೆ ತಂಡದವರಿಗೆ ಊರಿನ ಗ್ರಾಮಸ್ಥರು, ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.