ಸುದ್ದಿ ಕನ್ನಡ ವಾರ್ತೆ

ಗೋಕರ್ಣ : ಸಮುದ್ರದಲ್ಲಿ ಈಜಲು ಹೊದ ಆರು ಜನ ಪ್ರವಾಸಿಗರು ನೀರಿನ ಸೇಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಜೀವ ರಕ್ಷಣಾ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಗೋಕರ್ಣ ಮುಖ್ಯ ಕಡಲತೀರದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ
ಚಿತ್ರದುರ್ಗ ಜಿಲ್ಲೆಯ ಮನು (23), ಶಿವು (36), ಕಿರಣ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು. ಚಿತ್ರದುರ್ಗದಿಂದ 21 ಜನ ಸ್ನೇಹಿತರೊಡನೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದು ಅದರಲ್ಲಿ 6 ಜನ ಸಮುದ್ರದಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಆತನನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳು ತಕ್ಷಣಕ್ಕೆ ನೀರಿಗೆ ಧುಮುಕಿ ರಕ್ಷಣೆ ಮಾಡಿದ್ದಾರೆ . ಸಮುದ್ರದ ನೀರಿಗೆ ಇಳಿಯುವ ಮುನ್ನ ನೀರಿನ ಬಗ್ಗೆ ಎಚ್ಚರಿಕೆ ನೀಡಿದ್ದರು ಸಹ ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿದಾಗ ಈ ಘಟನೆ ನಡೆದಿದೆ. ಇವರನ್ನು ಅಲ್ಲಿಯ ಕರ್ತವ್ಯ ನಿರತ ಸಿಬ್ಬಂದಿಗಳಾದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ,ಮೋಹನ ಅಂಬಿಗ ಇವರು ರಕ್ಷಣೆ ಮಾಡಿದ್ದು, ಇವರಿಗೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದೀಪಕ್ ಗೌಡ ಸಹಾಯ ಮಾಡಿರುತ್ತಾರೆ .