ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತ ವ್ಯಾಪ್ತಿಯ ತಿಂಬೋಲಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವಾ ವೃತ್ತಿಯನ್ನು ಆರಂಭಿಸಿ ಅದೇ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರಾದ ಅಣ್ಣಾರಾವ ನೀಗಡೆ ಗುರುಗಳನ್ನು ತಿಂಬೋಲಿಯಲ್ಲಿ ಶುಕ್ರವಾರ ನಡೆದ ಜೋಯಿಡಾ ಮರಾಠಿ ಕ್ಲಸ್ಟರಿನ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಶಿಕ್ಷಕರ ಮೇಲಿನ ಗೌರವಾರ್ಥ ತಿಂಬೋಲಿ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಲಾಯಿತು.

ಶಿಕ್ಷಕ ವೃತ್ತಿ ಅಂದರೆ ಶಾಲೆ,ಶಾಲೆಯ ಪರಿಸರ,ಶಾಲೆಯ ಸುತ್ತಮುತ್ತಲಿನ ಪರಿಸರದ ಸಮಾಜದಲ್ಲಿ ಬದಲಾವಣೆಯನ್ನು ತರುವಂತಹ ಶಕ್ತಿ. ಅಣ್ಣರಾವ ನೀಗಡೆಯವರು ಜೋಯಿಡಾ ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತ ವ್ಯಾಪ್ತಿಯ ತಿಂಬೋಲಿ ಶಾಲೆಯಲ್ಲಿ ತಮ್ಮ ಶಿಕ್ಷಕ ಸೇವಾ ವೃತ್ತಿಯನ್ನು ಪ್ರಾರಂಭಿಸಿದರು.ಅಂದಿನ ಕಾಲದಲ್ಲಿ ಸರಿಯಾದ ವಸತಿ,ವಾಹನ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ನಡೆದಾಡಿಕೊಂಡು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದವರು.ವಯಸ್ಸಿನಲ್ಲಿ ಹಿರಿಯರಲಿ, ಕಿರಿಯರಿರಲಿ ಎಲ್ಲರನ್ನೂ ಒಂದೇ ರೀತಿಯ ಸಮಾನ ಗೌರವ ನೀಡುವವರು,ಸುಖ ದುಃಖಗಳಲ್ಲಿ ಸ್ಪಂದಿಸುವ ಸ್ಪಂದನೆ ಜೀವಿ, ಪರೋಪಕಾರಿ ಸ್ವಭಾವದ ನಿವೃತ್ತ ಶಿಕ್ಷಕರಾದ ಅಣ್ಣಾರಾವ ನೀಗಡೆ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಜನಮಾನಸದಲ್ಲಿ,ಗುರುಗಳ ಬಗ್ಗೆ ಇರುವ ಗೌರವಾದರ,ಗುರು ಶಿಷ್ಯರ ಸಂಬಂಧಗಳು ಜೀವಿತಾವಧಿಯವರೆಗೆ ನಿರಂತರ.