ಸುದ್ದಿ ಕನ್ನಡ ವಾರ್ತೆ
ಕುಮಟಾ:ರಂಗಮಿತ್ರ ನಾಟ್ಯ ಸಂಘ (ರಿ) ಕಲಬುರಗಿ
ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘ(ರಿ ) ಬೆಂಗಳೂರು
ಪ .ಪೂ .ಶ್ರೀ ಹಂಪಯ್ಯ ಮಹಾಸ್ವಾಮಿಗಳು ಮಹಾತ್ಮ ಪೀಠ ಗದ್ದುಗೆ ಮಠ ಕಳ್ಳಳ್ಳಿ ಇವರ ಸ್ಮರಣಾರ್ಥವಾಗಿ, ಕೊಡುವ ಕವಿ ಸಂಗಮ,2026ರ
ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮತ್ತು ನಾಟಕೋತ್ಸವ ಸಮಾರಂಭದಲ್ಲಿ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ನೀಡುವ, ರಂಗಭೂಮಿಗೆ ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ,ವಿಶಿಷ್ಟ ಸಾಧನೆಗೆ ವಿಶೇಷ ಗೌರವ ರಾಜ್ಯಮಟ್ಟದ ಕನ್ನಡ ಕವಿರತ್ನ ಪ್ರಶಸ್ತಿಯನ್ನು
ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಮಹಾಬಲೇಶ್ವರ ನಾಯ್ಕರವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಮಹಾಬಲೇಶ್ವರ ನಾಯ್ಕ ಮಿರ್ಜಾನರವರಿಗೆ ಜಿಲ್ಲೆಯ ರಂಗಭೂಮಿ ಕಲಾವಿದರು,ಗಣ್ಯರು,ಕವಿ,ನಾಟಕಕಾರ ಸಾತು ಗೌಡ ಅಂಕೋಲಾ,ಸುಮಂಗಲಾ ದೇಸಾಯಿ ಜೋಯಿಡಾದ ಶೇವಾಳಿಯ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷರು,ಪದಾಧಿಕಾರಿಗಳು ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರ,ಸನ್ಮಾನಗಳು ದೊರಕಲಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
