ಸುದ್ದಿ ಕನ್ನಡ ವಾರ್ತೆ
ಜೋಯಿಡಾದ ಉಳವಿಯ ಚಂದ್ರಾಳಿ ಯಲ್ಲಿ ನಾಯಿ ಯನ್ನು ಹಿಡಿಯಲು ಬಂದ ಚಿರತೆ ನಾಯಿಯನ್ನು ಕಚ್ಚುವ ವೇಳೆಯಲ್ಲಿ ಮನೆಯ ಜನರು ಬಂದ ಕಾರಣ ಕಚ್ಚಿದ ನಾಯಿಯನ್ನು ಬಿಟ್ಟು ಓಡಿ ಹೋದ ಘಟನೆ ನಡೆದಿದೆ.
ತಾಲೂಕಿನ ಉಳವಿ ಗ್ರಾಮ ಪಂಚಾಯತ ದ ಚಂದ್ರಾಳಿ ಗ್ರಾಮ ದ ಬುದೋ ನಾಗು ಕಾಲೇಕಾರ ಅವರ ಮನೆಯ ಸಾಕು ನಾಯಿ ಯನ್ನು ಸೋಮವಾರ ಬೆಳಿಗ್ಗೆ 5 30.ರ ವೇಳೆಗೆ ಮನೆಯ ಹೊರಗೆ ಬಿಡುತ್ತಿದ್ದಂತೆ ಬಾಗಿಲಲ್ಲೇ ನಾಯಿ ಯನ್ನು ಚಿರತೆ ಬಾಯಿ ಹಾಕಿ ಕಚ್ಚಿದೆ. ನಾಯಿಯನ್ನು ಹೊರಗೆ ಬಿಡಲು ಬಂದ ಬುದೋ ಅವರ ಮಗ ಮಂಜುನಾಥ ನಾಯಿಯ ಕೂಗು ಕೇಳಿ ಕೂಡಲೇ ಹೊರಗೆ ಓಡಿ ಬಂದರು ಈ ವೇಳೆಯಲ್ಲಿ ಚಿರತೆ ಮಂಜುನಾಥ ಕೂಗುತ್ತ ಓಡಿ ಬರುವುದನ್ನು ಗಮನಿಸಿ ಬಾಯಿಗೆ ಸಿಕ್ಕ ನಾಯಿ ಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದೆ ಎಂದು ಮಂಜುನಾಥ ಹೇಳುತ್ತಾರೆ…
.. ಕಳೆದ ವರ್ಷ ಇಲ್ಲಿ ದನದ ಕೊಟ್ಟಿಗೆ ಯಲ್ಲಿ ಕಟ್ಟಿದ ಎರಡು ಆಕಳು ಗಳನ್ನು ಹುಲಿ ಮುರಿದು ಕೊಂದಿತ್ತು. ಹಾಗಾಗಿ ನಾಯಿಗಳನ್ನು ಮನೆಯ ಒಳಗೆ ಎಲ್ಲರೂ ಇಟ್ಟು ಕೊಳ್ಳುತ್ತಾರೆ ,ಆದರೂ ಹುಲಿ ಚಿರತೆ ಗಳುಸಾಕು ಪ್ರಾಣಿ ಗಳು ಹೊರಗೆ ಬರುವುದನ್ನೇ ಕಾಯುತ್ತಾ ನಿಲ್ಲುತ್ತಿವೆ. ಒಟ್ಟಾರೆ ಸಾಕು ಪ್ರಾಣಿ ಗಳ ಜೊತೆಗೆ ಸಾರ್ವಜನಿಕ ರ ಮೇಲೂ ಧಾಳಿ ನಡೆಯದೇ ಇರಲಿ ಎಂದು ಜನ ಕೇಳಿಕೊಳ್ಳುತ್ತಿದ್ದಾರೆ. ಚಿರತೆ ಕಚ್ಚಿದ ನಾಯಿಗೆ ಉಳವಿಯ ಪಶು ವೈದ್ಯರು ಆರೈಕೆ ಮಾಡುತ್ತಿದ್ದಾರೆ
