ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಿನಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಮಾಹಿತಿ ಶಿಕ್ಷಣ ಸಂವಹನ ಉತ್ತರಕನ್ನಡ, ಕಾರವಾರ,ಸಪ್ತಸ್ವರ ಸೇವಾ ಸಂಸ್ಥೆ(ರಿ)ಕಲಾ ತಂಡದ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾ ಪ್ರದರ್ಶನ ಮುಂಡಗೋಡಿನ ಆಯ್ದ 15 ಗ್ರಾಮದಲ್ಲಿ ತಂಬಾಕು ಸೇವನೆ,ಕ್ಷಯ,ಎಚ್ ಐ ವಿ,ಬ್ರೂಣ ಹತ್ಯೆ ನಿಷೇಧ,ಮಂಗನಕಾಯಿಲೆ ಹೀಗೆ ಅನೇಕ ವಿಷಯದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮವನ್ನು ಡಾ.ನರೇಂದ್ರ ಪವಾರ್ ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡಗೋಡ,ಎಸ್ ಎಸ್ ಪಟ್ಟಣ ಶೆಟ್ಚಿ,ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು,ಮುಂಡಗೋಡ,ಡಾ. ಭರತ ಡಿ ಟಿ,ಆಡಳಿತ ವೈದ್ಯಾಧಿಕಾರಿಗಳು,ಎನ್ ಹೆಚ್ ಹೀರೆಮಠ,ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿಗಳು,ಪ್ರಸಾದ ಆರೋಗ್ಯ ನಿರೀಕ್ಷಾಣಾಧಿಕಾರಿಗಳು ಸಹಕರಿಸಿದರು.ಜೊತೆಗೆ ಎಲ್ಲಾ ಭಾಗದ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು,ಗ್ರಾಮಸ್ಥರು ಸಹಕರಿಸಿದರು.
ಕಲಾತಂಡದಲ್ಲಿ ಜೋಯಿಡಾ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ,ಶಿಲ್ಪಾ ಹೆಗಡೆ,ಪದ್ಮಶ್ರೀ ಶೇಟ್,ನಾಗವೇಣಿ ಹೆಗಡೆ,ಕಲ್ಲಪ್ಪ,ಸುಮಾ ಭಟ್ಟ,ವಿಜಯ ಸಿದ್ದಿ,ಚಕ್ರವರ್ತಿ ಶೇಟ್ ಇನ್ನಿತರರು ಇದ್ದರು.
