ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತರುಣನೊಬ್ಬ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಉತ್ತರಕನ್ನಡದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡುಹಗಲೇ ನಡೆದಿದೆ.
ಕಾಳಮ್ಮನಗರದ ರಂಜಿತಾ ಬನ್ಸೊಡೆ (30) ಕೊ*ಲೆಯಾದ ಮಹಿಳೆ. ಕಾಳಮ್ಮಮಗರದ ರಫೀಕ್ ಯಳ್ಳೂರ ಎಂಬಾತ ಈಕೆಯ ಕುತ್ತಿಗೆಗೆ ಚಾಕುವಿನಿಂದ ತಿವಿದು ಅಲ್ಲಿಂದ ಪರಾರಿಯಾಗಿದ್ದಾನೆ.ನರಳುತ್ತಿದ್ದ ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಆಕೆ ಊಸಿರುಬಿಟ್ಟಿದ್ದಾಳೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಓಡಿಹೋದ ರಫೀಕ್ ಗಾಗಿ ಶೋಧ ನಡೆಸುತ್ತಿದ್ದಾರೆ.ಈತನ ಶೋಧಕ್ಕೆ ಸಹಕರಿಸಲು ಈತನ ಭಾವಚಿತ್ರವನ್ನು ಗ್ರುಪ್ ಗಳಲ್ಲಿ ಹಾಕಿದ್ದಾರೆ.ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು ಪಟ್ಟಣದಲ್ಲಿ ಭಯದ ವಾತಾವರಣ ಹುಟ್ಟಿಸಿದೆ.ಹಲವರು ಘಟನೆಯನ್ನು ಖಂಡಿಸಿದ್ದು ಕೊಲೆಗಾರನನ್ನು ಪತ್ತೆಹಚ್ಚುವಂತೆ ಆಗ್ರಹ ಮಾಡಿದ್ದಾರೆ.
ಎಸ್.ಪಿ ದೀಪನ್ ಯಲ್ಲಾಪುರದಲ್ಲಿ ಠಿಕಾಣಿ ಹೂಡಿದ್ದಾರೆ.
ಹಿಂದೂ ಸಂಘಟನೆಗಳು ನಾಳೆ ಭಾನುವಾರ ಯಲ್ಲಾಪುರ ಬಂದ್ ಗೆ ಕರೆನೀಡಿದ್ದಾರೆ.
ಕೆಲವು ಹಿಂದೂ ಸಂಘಟನೆ ಪ್ರಮುಖರು ಠಾಣೆಗೆ ಜಮಾಯಿಸಿ ಆರೀಪಿ ರಫಿಕ ಬಂಧಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದುಪಟ್ಟು ಹಿಡಿದಿದ್ದಾರೆ.
