ಸುದ್ದಿ ಕನ್ನಡ ವಾರ್ತೆ
ಕುಳಗಿ:ದಿನಾಂಕ 27-12-2025 ರಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ಕಲಬಾವಿ ಗಸ್ತಿನಲ್ಲಿ ಶ್ರೀಗಂಧದ ಮರವನ್ನು ಕಟಾವಣೆ ಮಾಡಿ ಸಾಗಾಟ ಮಾಡುವ ಉದ್ದೇಶದೊಂದಿಗೆ ಆಗಮಿಸಿದ್ದ ಕಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದು,ಸದರಿ ಆರೋಪಿತರ ಪತ್ತೆಗಾಗಿ ಶ್ವಾನದಳ ಹಾಗೂ ವಿಧಿ ವಿಜ್ಞಾನ ತಂಡದವರು ಸ್ಥಳ ಪರಿಶೀಲನೆ ನಡೆಸಿದ್ದು,ಈ ಸಂದರ್ಭದಲ್ಲಿ ಒಂದು ಮಾರುತಿ ವಾಹನ ಹಾಗೂ ಹಸಿ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದ ಬಗ್ಗೆ ಅರಣ್ಯ ಮೊಕದ್ದಮೆ ದಾಖಲಾಗಿದ್ದು ಇರುತ್ತದೆ. ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು ನಿಲೇಶ್ ಶಿಂದೆ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಎಂ ಎಸ್ ಕಳ್ಳಿಮಠ್ ವನ್ಯಜೀವಿ ಉಪವಿಭಾಗ ದಾಂಡೇಲಿರವರ ನಿರ್ದೇಶನದಂತೆ ಸಾಗರ ಶಶಿಧರ ಬೋಗೂರ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಳಗಿ ವಲಯದ ಸಿಬ್ಬಂದಿಗಳಾದ ಪಕೀರಪ್ಪ ಸುಣಗಾರ,ಕುಮಾರ ನಾಯಕ,ಉಮೇಶ ಗಾಂವಿ ಶಿವಾನಂದDrfo ಮಾಲತೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಇರುತ್ತದೆ.
