ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಕ್ರಿಶ್ಚಿಯನ್ ಸಮುದಾಯದ ಬಾಂಧವರು ಕ್ರೀಸ್ ಮಸ್ ಹಬ್ಬದ ತಯಾರಿಯ ಸಂಭ್ರಮದಲ್ಲಿ ತೊಡಗಿದ್ದಾರೆ.
ನಂದಿಗದ್ದೆಯಲ್ಲಿರುವ ಸಂತ ಅಂತೋನಿ ಚರ್ಚ ಗುಂದದ ಆವರಣ ಸ್ವಚ್ಛತೆ,ದೀಪಾಲಂಕಾರ, ಗೊದೋಳಿಯ ನಿರ್ಮಾಣದಲ್ಲಿ ಯುವಕರು, ಯುವತಿಯರು, ಪುರುಷರು, ಮಹಿಳೆಯರು ತೊಡಗಿಕೊಂಡಿದ್ದಾರೆ. ಅದಲ್ಲದೇ ತಮ್ಮ ತಮ್ಮ ವಾಡಾದಲ್ಲಿಯೂ ಗೊದೋಳಿಯ ನಿರ್ಮಾಣ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ. ಮನೆಗಳಿಗೂ ದೀಪಾಲಂಕಾರ ಮಾಡಲಾಗಿದೆ.ಮಕ್ಕಳು ಕ್ರೀಸ್ ಮಸ್ ಹಬ್ಬದ ನಿಮಿತ್ತ ಸಂಜೆಯ ವೇಳೆ ನಂದಿಗದ್ದೆ ಚರ್ಚ್ ಆವರಣದಲ್ಲಿರುವ ಸಂತ ಅಂತೋನಿ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ವಿವಿಧ ಕಾರ್ಯಕ್ರಮಗಳ ತಯಾರಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ಜೋಯಿಡಾ, ಕುಂಬಾರವಾಡಾ, ರಾಮನಗರ ಭಾಗದ ಕ್ರಿಶ್ಚಿಯನ್ ಸಮುದಾಯದ ಬಾಂಧವರು ಸಹ ಕ್ರೀಸ್ ಮಸ್ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.ಒಟ್ಟಿನಲ್ಲಿ ಕ್ರೀಸ್ ಮಸ್ ಹಬ್ಬವನ್ನು ಸ್ವಾಗತಿಸುವ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
