ಸುದ್ದಿ ಕನ್ನಡ ವಾರ್ತೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ  ಸೋಂದಾ  ಸ್ವರ್ಣವಲ್ಲಿ  ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತತ್ ಕರಕಮಲ ಸಂಜಾತ ಶ್ರೀ ಶ್ರೀಮದ್ ಆನಂದಬೋಧೇoದ್ರ ಸರಸ್ವತೀ ಮಹಾಸ್ವಾಮಿಗಳು ಕಾಂಚಿ ಶ್ರೀ ಏಕಾಂಬರೇಶ್ವರ ದೇವಾಲಯಕ್ಕೆ ಭೇಟಿ ಭೇಟಿ ನೀಡಿದರು.

ಪರಮಪೂಜ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32 ನೇ ಆರಾಧನಾ ಮಹೋತ್ಸವದ ಪಾವನ ಪರ್ವದಲ್ಲಿ ಪರಮಪೂಜ್ಯ ಶ್ರೀಶ್ರೀಮದ್ ಆನಂದಭೋದೇoದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರಚಿತ ಶ್ರೀ ಕಾಮಾಕ್ಷಿ ನವರತ್ನಮಾಲಿಕಾ ಸ್ತೋತ್ರವನ್ನು ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಮ್ಮುಖದಲ್ಲಿ ಕಾಂಚಿ ಕಾಮಕೋಟಿ ಪೀಠದ ಪರಮಪೂಜ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಪ್ರಸನ್ನತೆಯಿಂದ ಅವಲೋಕಿಸಿದರು.