ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ. ತಾಲೂಕಿನ ಹಿತ್ಲಕಾರಗದ್ದೆ–ಮಾಗೋಡ ಜಿಲ್ಲಾ ಮುಖ್ಯ ರಸ್ತೆ ಹಾಗೂ ನಂದೊಳ್ಳಿ–ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ (ಗ್ರಾಮೀಣ ರಸ್ತೆ) ನಿರ್ಮಾಣಕ್ಕಾಗಿ ಒಟ್ಟು ₹9 ಕೋಟಿ 90 ಲಕ್ಷ ರೂ. ಅನುದಾನ ಮಂಜುರಾಗಿದೆ.

ಈ ಎರಡು ಪ್ರಮುಖ ರಸ್ತೆ ಯೋಜನೆಗಳು ಗ್ರಾಮೀಣ ಭಾಗದ ಸಂಚಾರಕ್ಕೆ ಅನೂಕುಲವಾಗಲಿದೆ ಜನಜೀವನ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಗೋಪಾಲಕೃಷ್ಣ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯ ನವೀಕರಣವು ಭಕ್ತರ ಸಂಚಾರ, ಸ್ಥಳೀಯ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಿದೆ. ಹಿತ್ಲಕಾರಗದ್ದೆ–ಮಾಗೋಡ ಪ್ರಮುಖ ಮಾರ್ಗದ ಸುಧಾರಣೆ ಮೂಲಕ ತಾಲೂಕಿನ ಒಳನಾಡು ಸಂಪರ್ಕತೆ ಮತ್ತಷ್ಟು ಬಲಪಡಲಿದೆ.

ಕಳೆದ ಅನೇಕ ವರ್ಷಗಳಿಂದ ಈ ಭಾಗದ ರಸ್ತೆಗಳು ಸಂಪೂರ್ಣ  ಹೊಂಡ ಮಯ ವಾಗಿದ್ದರಿಂದ ಈ ಭಾಗದ ಜನರು ಓಡಾಡಲು ತುಂಬಾ ಕಷ್ಟವಾಗಿತ್ತು. ಇದೀಗ ಈ ರಸ್ತೆಗೆ ಹಣ ಮಂಜೂರಾಗಿರುವುದು ಈ ಭಾಗದ ಜನರಿಗೆ ಸಂತಸದ ವಿಷಯವಾಗಿದೆ. ಕಳೆದ ಬಹು ವರ್ಷಗಳ ಬೇಡಿಕೆ ಶೀಘ್ರವೇ ನನಸಾಗಲಿ ಎಂಬುದು ತಿಳಿಯ ಜನತೆಯ ಆಶಯವಾಗಿದೆ.