ಸುದ್ದಿ ಕನ್ನಡ ವಾರ್ತೆ
ಭಾರತ್ ಗ್ಯಾಸ್ ನ ಅಧಿಕೃತ ವಿತರಕರಾದ ಹಂಚಿನಮನಿ ಗ್ಯಾಸ್ ಎಜಂಸಿ ಯವರು ಗ್ಯಾಸ್ ವಿತರಣೆ ಸರಿಯಾಗಿ ಮಾಡುತ್ತಿಲ್ಲ. ಅಂಬಿಕಾನಗರದಿಂದ ಬಂದು ಪ್ರತಿದಿನ ವಿತರಣೆ ಮಾಡಬೇಕಾದವರು ವಾರಕ್ಕೊಮ್ಮೆ ಬರುತ್ತಿದ್ದಾರೆ.
ಮನೆ ಮನೆಗೆ ಪುರೖಕೆ ಮಾಡದೇ ಎರಡು ಮೂರು ಅಂಗಡಿ ಗಳಲ್ಲಿ ಇಟ್ಟು ಹೋಗುತ್ತಿದ್ದಾರೆ. ಗ್ರಾಹಕರು ಅಲ್ಲಿಂದ ಹೆಚ್ಚಿನ ಬೆಲೆಗೆ ಕೊಂಡು ಒಯ್ಯಬೇಕಾಗುತ್ತದೆ. ಒಳಗಿನ ಜವಸತಿ ಪ್ರದೇಶಕ್ಕೆ ಹೋಗದೆ ಮುಖ್ಯ ರಸ್ತೆಯಲ್ಲಿ ಮಾತ್ರ ಬಂದು ಹೋಗುತ್ತಾರೆ. ಗ್ರಾಹಕರಿಗೆ ರಸಿದಿ ಕೊಡುವದಿಲ್ಲ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆ ಪಡೆಯುತ್ತಾರೆ. ದೂರವಾಣಿ ಕರೆ ಸ್ವಿಕರಿಸುವದಿಲ್ಲಾ ಎಂದು ದೂರು ನೀಡಲಾಯಿತು.
ಇವತ್ತು ಕಾಳಿ ಬ್ರಿಗೇಡ್ ಸಂಘಟನೆಯ ಪ್ರಮುಖರು, ವ್ಯಾಪಾರಸ್ಥರ ಸಂಘದ ಪ್ರಮುಖರು ಕೆಲ ಗ್ರಾಹಕರ ಜತೆಗೆ ಬಂದು ತಹಸೀಲ್ದಾರ್, ಜೋಯಡಾ ಮತ್ತು ಪೋಲಿಸ್ ನೀರಿಕ್ಷಕರಿಗೆ ಲಿಖಿತ ದೂರು ಸಲ್ಲಿಸಿದರು. ಗ್ಯಾಸ್ ಎಜಂಸಿಯವರನ್ನು ತಕ್ಷಣ ಕರೆಯಿಸಿ ಗ್ರಾಹಕರ ಸಭೆ ನಡೆಸಬೇಕು ಮತ್ತು ಎಜಂಸಿಯವರ ಮೇಲೆ ಸೂಕ್ತ ಕ್ರಮ ಕೖಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನಿಲ್ ದೇಸಾಯಿ, ಮುಖ್ಯ ಸಮಿತಿಯ ಅಧ್ಯಕ್ಷರಾದ ಉಮೇಶ ವೇಳಿಪ್, ಕಾರ್ಯದರ್ಶಿ ಸಮೀರ್ ಮುಜಾವರ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಧಾಕರ್ ದೇಸಾಯಿ, ಕಾರ್ಯದರ್ಶಿ ಅಜೀತ್ ಗಾವಡಾ, ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ರಫೀಕ್ ಖಾಜಿ, ಕೆ ಎಲ್ ನಾಯ್ಕ್, ನಾರಾಯಣ ಹೆಬ್ಬಾರ್, ಪ್ರಭಾಕರ್ ನಾಯ್ಕ್ ಮತ್ತು ಗ್ಯಾಸ್ ಗ್ರಾಹಕರು ಉಪಸ್ಥಿತರಿದ್ದರು. ಶಿರಸ್ತೇದಾರ ಸಂಜಯ ಭಜಂತ್ರಿಯವರು ಅರ್ಜಿ ಸ್ವಿಕರಿಸಿದರು.
