ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜನಪ್ರಿಯ ಮಾನ್ಯ ಸಂಸದರಾದ  ವಿಶ್ವೇಶ್ವರ ಹೆಗಡೆ ಕಾಗೇರಿಯವರ ದ್ವಿತೀಯ ಪುತ್ರಿ ಕು.ರಾಜಲಕ್ಷ್ಮಿ ಮತ್ತು ಚಿ.ಬಾಲಚಂದ್ರ ಅವರ ವಿವಾಹ ಸಮಾರಂಭ ಶಿರಸಿ ತಾಲೂಕಿನ ಕಾಗೇರಿಯ ಸ್ವಗೃಹದಲ್ಲಿ ಜರುಗಿತು.

ಈ ವಿವಾಹ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ  ವಿಜಯೇಂದ್ರ ಯಡಿಯೂರಪ್ಪ ಅವರೊಂದಿಗೆ ಭಾಗವಹಿಸಿ ನೂತನ ವಧು-ವರರ ಬಾಳು ಸುಖ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. ಈ ವೇಳೆ ಪ್ರೀತಿ-ಅಭಿಮಾನದಿಂದ ಸ್ವಾಗತಿಸಿ, ಸತ್ಕರಿಸಿದರು.

ಈ ಸಂದರ್ಭದಲ್ಲಿ ಕಾಗೇರಿಯವರ ಕುಟುಂಬದ ಹಿರಿಯರು, ಪಕ್ಷದ ಪ್ರಮುಖರಾದ  ಸುನೀಲ್ ನಾಯಕ್,  ಕೆ.ಜಿ. ನಾಯಕ್,  ಸುಭಾಷ್ ಪಾಟೀಲ್, ಹಿರಿಯರಾದ  ಗುರುಮೂರ್ತಿ ಯುವ ನಾಯಕ ಪರ್ಬತ್ ನಾಯ್ಕ ಹಾಗೂ ಹಲವಾರು ಮುಖಂಡರು, ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.