ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ತಾಲೂಕಾ ಕೇಂದ್ರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹುಡಸಾ ಝರಿ ಮೂಲದ ತೋಟ್ಟಿಯ ಮೆಲ್ಚಾವಣಿ(ಸ್ಲಾಬ್) ಜಂಗು ಹಿಡಿದು ಕುಸಿದು ಬೀಳುತ್ತಿದೆ. ಇದೇ ಕಲುಷಿತಗೊಂಡ ಕುಡಿಯುವ ನೀರು ಕುಡಿಯುತ್ತಿರುವ ಸಾರ್ವಜನಿಕರ ಆರೋಗ್ಯ ಸಮಸ್ಯೆ ಉಲ್ಭಣಕ್ಕೆ ಕಾರಣವಾಗುತ್ತಿದ್ದ ಬಗ್ಗೆ ಕೇಳಿ ಬರುತ್ತಿದೆ.
ಜೋಯಿಡಾದಲ್ಲಿ ಕಳೆದೆರಡು ದಶಕಗಳಿಂದಲ್ಲೂ ಕುಡಿಯುವ ನೀರಿನ ಸಮಸ್ಯೆ ಕಾಡುತಿದೆ, ಇದಕ್ಕಾಗಿ ಕೋಟ್ಯಾಂತರ ಹಣ ಖರ್ಚು ಮಾಡಿದ್ದರೂ ಇಂದಿಗೂ ತಾಲೂಕಾ ಆಡಳಿತದಿಂದ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ.
ಹುಡಸಾ ಕುಡಿಯುವ ನೀರಿನ ಸಂಗ್ರಹದ ತೊಟ್ಟಿ ಸಿಮೆಂಟ್ ಕಾಂಕ್ರೇಟ ಜಂಗು ಹಿದು ಕಳಚಿ ಬೀಳುವ ಮೂಲಕ ನೀರು ಕಲುಷಿತಗೋಂಡು ರೋಗಕ್ಕೆ ಆವ್ಹಾನ ನೀಡುವಂತಿದ್ದರೆ, ತಾಲೂಕಾ ಕೇಂದ್ರದ ಕುಡಿಯುವ ನೀರಿನ ತೋಟ್ಟಿ ತನ್ನ ಧಾರಣಾ ಸಾಮರ್ಥ್ಯ ಕಳೆದುಕೊಂಡು ಸೋರುತ್ತಿದೆ, ಈ ತೋಟ್ಟಿ ಮೂರು ನಾಲ್ಕು ಬಾರಿ ರಿಪೇರಿ ಹೆಸರಲ್ಲಿ ಹಣ ದುರ್ಬಳಕೆ ಮಾಡಲಾಗಿದೆ. ಈಗ ಈ ಟ್ಯಾಂಕಲ್ಲಿ ಟನ್ ಗಟ್ಟಲೆ ಸಿಮೆಂಟ ಕಾಂಕ್ರೇಟ ಬಿದ್ದಿದ್ದು, ಇದು ನೀರನಲ್ಲಿ ಸಿಮೆಂಟ ಅಂಶ ಬೆರೆಯುತ್ತಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪಂಚಾಯತ್ ಮತ್ತೆ ಮತ್ತೆ ದುರಸ್ಥಿ ಹೆಸರಿನಲ್ಲಿ ಹಣ ಸುರಿಯುವ ಮೂಲಕ ಸರಕಾರದ ಹಣ ಪೋಲ್ ಮಾಡಲಾಗುತ್ತಿದೆ.

ಜೋಯಿಡಾ ತಾಲೂಕಾ ಕೇಂದ್ರದಲ್ಲಿ ಶಾಲಾ ಮಕ್ಕಳು, ಹಾಗೂ ಸಾರ್ವಜನಿಕ ವಲಯದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಲಿದ್ದು, ಕುಡಿಯುವ ನೀರಿನ ಕಲುಷಿತ ಸಮಸ್ಯೆ, ಸಿಮೆಂಟ ಕಬ್ಬಿಣದ ಜಂಗಿನಂತ ವಿಷಕಾರಿ ದ್ರಾವಣ ನೀರಿನಲ್ಲಿ ಸೇರುವ ಮೂಲಕ ಅನಾರೋಗ್ಯ ಸಮಸ್ಯೆಗೆ ಕಾಡುತ್ತಿದೆ ಎಂದು ಸಾರ್ವಜನಿಕರ ಆರೋಪ ಕೇಳಿ ಬರುತ್ತಿದೆ.
ರಾಘವೇಂದ್ರ ನಾಯ್ಕ, ಸ್ಥಳಿಯ ನಿವಾಸಿ :- ಕುಡಿಯುವ ನೀರಿನ ತೋಟ್ಟಿ ಜಂಗು ಹಿಡಿದ ಕಬ್ಬಿಣದ ತುಂಡುಗಳಿಂದ ತುಂಬಿ ಕಲುಷಿತಗೊಂಡಿದೆ. ನಮಗೆ ಬರುವ ಕುಡಿಯುವ ನೀರು ಕಲುಷಿತಗೊಂಡು ರೋಗಗ್ರಸ್ಥವಾಗುತ್ತಿದೆ. ದಯವಿಟ್ಟು ಜನರ ಜೀವಕ್ಕೆ ಹಾನಿಯಾಗದ ಶುದ್ದ ಕುಡಿಯುವ ನೀರು ಕೊಡಿ.
