ಸುದ್ದಿ ಕನ್ನಡ ವಾರ್ತೆ
ಕುಮಟಾ: ತಾಲೂಕಿನ ಶ್ರೀ ಭೈರವೇಶ್ವರ ದೇವಸ್ಥಾನ ಯಾಣ ದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಅಭಿಷೇಕ ನೆರವೇರಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.

ಮಹಾಶಿವರಾತ್ರಿಯ ಪ್ರಯುಕ್ತ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಕಲಾ ಶ್ರೀ ಯಕ್ಷ ಮಿತ್ರ ಮಂಡಳಿ ಯಾಣ ಇವರ ಆಶ್ರಯದಲ್ಲಿ ದಕ್ಷಿಣೊತರ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಭೂಕೈಲಾಸ ಹಾಗೂ ಜಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶಿಸಲಾಯಿತು.

ಈ ಯಕ್ಷಗಾನ ಪ್ರಸಂಗದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಜಿ ಆರ್ ಹೆಗಡೆ ಸಿದ್ದರ ಮಠ, ಮೃದಂಗ ವಾದಕರಾಗಿ ಗಜಾನನ ಭಂಡಾರಿ ಬೋಳ್ಗೆರೆ, ಸುಬ್ರಹ್ಮಣ್ಯ ಭಟ್ ಬಾಡ, ಚಂಡೇವಾಧಕರಾಗಿ ಗಜಾನನ ಹೆಗಡೆ ಸಾಂತೂರು ರವರು ಉಪಸ್ಥಿತರಿದ್ದರು.

ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದ ಕುಳಿ, ಗಣಪತಿ ಹೆಗಡೆ ತೋಟಿ ಮನೆ, ಸುಬ್ರಹ್ಮಣ್ಯ ಹೆಗಡೆ ಮೂರೂರು, ವಿಘ್ನೇಶ್ವರ ಹಾವಗೋಡಿ, ವಿನಾಯಕ ಭಟ್ ಕತಗಾಲ, ದರ್ಶನ್ ಭಟ್ ಮುಗ್ವಾ, ವಿನಾಯಕ ಗುಂಡಬಾಳ, ಪಾಂಡುಪಟಗಾರ ಸoಡಳ್ಳಿ, ಮಹೇಂದ್ರ ಎಂ ಮರಾಠಿ, ಈಶ್ವರ ಹಂಗೇರಿ, ಸದಾನಂದ ಪಿ ಮರಾಠಿ, ಚೇತನ್ ಕುಮಾರ್ ಎಂ ಮರಾಠಿ, ಕುಮಾರಿ ದೀಕ್ಷಿತ ಎಸ್ ಪಟಗಾರ, ಶಂಕರ ಮರಾಠಿ ಯಾಣ ರವರು ಪಾಲ್ಗೊಂಡಿದ್ದರು