ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ),ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ,ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಅಂಬೋಳಿ ಶಾಲೆಯ ಸಹಯೋಗದಲ್ಲಿ ನಂದಿಗದ್ದೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪ್ರತಿಭಾಕಾರಂಜಿ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರತಿಭೆಯನ್ನು ಪ್ರದರ್ಶಿಸಲು ಇರುವಂತಹ ವೇದಿಕೆ,ಪ್ರತಿಭೆ ದೇವರು ಕೊಟ್ಟ ವರ,ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಗುರುಹಿರಿಯರ, ಶಿಕ್ಷಕರ ಮಾರ್ಗದರ್ಶನ ಅಗತ್ಯ,ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸದ ಪಾಲಕರ,ಶಿಕ್ಷಕ ವೃಂದದವರ ಬಗ್ಗೆ, ವೇದಿಕೆ,ಭೋಜನ,ಇನ್ನಿತರ ವ್ಯವಸ್ಥೆಯೊಂದಿಗೆ ಅಚ್ಚುಕಟ್ಟಾಗಿ ಯಶಸ್ಸಿನ ಕಾರ್ಯಕ್ರಮ ನಡೆಸಲು ಸಹಕರಿಸಿದ ಸಮುದಾಯದ ಬೆಂಬಲಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕನ್ನಡ ಕಂಠಪಾಠ,ಇಂಗ್ಲಿಷ್ ಕಂಠಪಾಠ,ಧಾರ್ಮಿಕ ಪಠಣ ಸಂಸ್ಕೃತ,ಧಾರ್ಮಿಕ ಪಠಣ ಅರೇಬಿಕ್,ದೇಶಭಕ್ತಿಗೀತೆ,ಛದ್ಮವೇಷ,ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ,ಕ್ಲೇ ಮಾಡಲಿಂಗ್, ಭಕ್ತಿ ಗೀತೆ,ಆಶು ಭಾಷಣ,ಹಿಂದಿ ಕಂಠಪಾಠ,ಪ್ರಬಂಧ ರಚನೆ,ಕವನ/ ವಾಚನ /ಪದ್ಯವಾಚನ,ಮಿಮಿಕ್ರಿ ಸ್ಪರ್ಧೆಗಳಲ್ಲಿ ನಂದಿಗದ್ದೆ ಕ್ಲಸ್ಟರಿನ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ನಂದಿಗದ್ದೆ ಕ್ಲಸ್ಟರಿನ ವಿವಿಧ ಶಾಲೆಗಳ, ಇನ್ನುಳಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಸ್ಪರ್ಧೆಯ ನಿರ್ಣಾಯಕರಾಗಿ ಸಹಕಾರ ನೀಡಿದರು.ಕಾರ್ಯಕ್ರಮದ ಆಯೋಜನೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಿದರು. ಸಮಾರೋಪ ಹಾಗೂ ಬಹುಮಾನ ವಿತರಣೆಯ ವೇದಿಕೆಯಲ್ಲಿ ಊರಿನ ಹಿರಿಯರಾದ ದೇಸಾಯಿ ಬಂಧುಗಳು,ಅಂಬೋಳಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ,ಉಪಾಧ್ಯಕ್ಷರು,ಗ್ರಾಮ ಪಂಚಾಯತ ಸದಸ್ಯರಾದ ವಿಷ್ಣು ಬಿರಂಗತ,ಗಣ್ಯರಾದ ಬುಧೋ ಕಾಲೇಕರ,ಶಿಕ್ಷಕರಾದ ಸಂತೋಷ ರಾಯ್ಕರ,ಬಿ.ಆರ್.ಪಿ ಶಶಿಕಾಂತ ಹೂಲಿ ಇದ್ದರು.ವೇದಿಕೆಯ ಮೇಲಿನ ಗಣ್ಯರು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ನಿರ್ಣಾಯಕರಾಗಿ ಸಹಕಾರ ನೀಡಿದ ಶಿಕ್ಷಕ ವೃಂದದವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.

ಅಂಬೋಳಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು,ಊರಿನ ಹಿರಿಯರು ಪಾಲಕರು, ಪೋಷಕರು, ಮಾತೆಯರು,ಯುವಕರು,ಯುವತಿಯರು ಎಲ್ಲರಿಗೂ ರುಚಿ,ಶುಚಿ ಭೋಜನದ ವ್ಯವಸ್ಥೆ ಮಾಡಿದ್ದರು.ಅಂಬೋಳಿ ಶಾಲೆಯ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಶಿಕ್ಷಣಾಭಿಮಾನಿಗಳು ಬಹುಮಾನದ ಪ್ರಾಯೋಜಕತ್ವ ಮಾಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಂದಿಗದ್ದೆ ಕ್ಲಸ್ಟರಿನ ಸಿ.ಆರ್.ಪಿ ಭಾಸ್ಕರ ಗಾಂವ್ಕರ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ತಾಲೂಕಿನ ಶೈಕ್ಷಣಿಕ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಅನುಪಮಾ ಖಾರ್ವಿ,ಸಹ ಶಿಕ್ಷಕಿ ರಾಜಶ್ರೀ ನಾಯಕ ಸಹಕಾರ ನೀಡಿದರು.