ಸುದ್ದಿ ಕನ್ನಡ ವಾರ್ತೆ
. ಯಲ್ಲಾಪುರ:ತಾಲೂಕಿನ ರಾಷ್ಟೀಯ ಹೆದ್ದಾರಿಯ 63 ರಲ್ಲಿ ಶಿರಲೆ ಕ್ರಾಸ್ ಹತ್ತಿರ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಅಂಕೋಲಾದ ಕಡೆಗೆ ಹೊರಟಿದ್ದ ಲಾರಿಯು ಅತಿ ವೇಗದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಚಾಲಕ ಜೀವ ಉಳಿಸಿಕೊಳ್ಳಲು ಹಾರಿದ ಕಾರಣ ತಲೆಗೆ,ಕಾಲಿಗೆ ಗಂಭೀರ ಗಾಯವಾದ ಪರಿಣಾಮ ಸಾವನ್ನಪ್ಪಿದ್ದಾನೆ.
ಲಾರಿ ಪಲ್ಟಿಯಾದ ರಭಸಕ್ಕೆ ಜಖಂ ಗೊಂಡಿದ್ದು,ಸಾವನ್ನಪ್ಪಿದ ಚಾಲಕನನ್ನು ಬಿಹಾರ ಮೂಲದ ಮುಖೇಶಕುಮಾರ ತಿಕೇದ ನಾರಾಯಣದೇವ ಎಂದು ಗುರುತಿಸಲಾಗಿದೆ.ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
