ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ಪಟ್ಟಣದ ಗಾಂಧಿ ಕುಟಿರದಲ್ಲಿ ನಡೆಯುತ್ತಿರುವ ಎರಡನೇಯ ದಿನದ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀಮದ್ ವಿಶ್ವಸಂತೋಷ ಭಾರತೀ ಸ್ವಾಮೀಜಿಯವರು ಭಾರತೀಯ ಪರಂಪರೆ,ಸಂಸ್ಕಾರ,ಸಂಸ್ಕೃತಿಗಳುಜಗತ್ತಿಗೇ ಮಾದರಿಯಾಗಿದ್ದು,ಇಂತಹ ಶ್ರೇಷ್ಠ ಪರಂಪರೆ ಮುಂದುವರೆಯಲು ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಬೇಕು,ನಮ್ಮ ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದದ್ದು,ಇಂತಹ ಧರ್ಮದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು.ಸನಾತನ ಧರ್ಮದ ಬಗ್ಗೆ,ಸಂಸ್ಕಾರ,ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.ನಮ್ಮ ಸಂಪ್ರದಾಯ,ಶಿಷ್ಟಾಚಾರಗಳನ್ನು ಕಾಪಾಡಿಕೊಳ್ಳಬೇಕು,ಸಂಕಲ್ಪ ಉತ್ಸವದಲ್ಲಿ ಯಕ್ಷಗಾನಕ್ಕೆ ಒತ್ತು ನೀಡುವ ಮೂಲಕ ಸಂಸ್ಕೃತಿ ಉಳಿಸುವ ಬೆಳೆಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶಿಕ್ಷಕಿ ಯಮುನಾ ನಾಯ್ಕ ಹಾಗೂ ಕೃಷಿ ಕ್ಷೇತ್ರದ ಸಾಧಕರಾದ ಕಲ್ಲಪ್ಪ .ಕೆ.ನಾಯ್ಕ ಕಲಕರಡಿ ಇವರಿಗೆ ಸಂಕಲ್ಪ ಪ್ರಶಸ್ತಿಯನ್ನು ಶ್ರೀಪಾದರು ಪ್ರಧಾನ ಮಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಶಾಂತಾರಾಮ ಸಿದ್ದಿ,ವಿಶ್ವ ದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ,ಪಹರೆ ವೇದಿಕೆಯ, ನ್ಯಾಯವಾದಿ ನಾಗರಾಜ ನಾಯಕ ಕಾರವಾರ,ಟಿ.ಎಮ್.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ,ಪತ್ರಿಕಾ ಮಾಧ್ಯಮದ ನಾಗರಾಜ ಮತ್ತಿಗಾರ,ಪ್ರವೀಣ ಹೆಗಡೆ,ಮದನೂರು ಸೊಸೈಟಿ ಅಧ್ಯಕ್ಷ ಮಹೇಶ ದೇಸಾಯಿ, ಪ್ರಮುಖರಾದ ಸದಾನಂದ ಹಲವಳ್ಳಿ,ಉದ್ಯಮಿ ಬಸವರಾಜ ಓಶೀಮಠ ಉಪಸ್ಥಿತರಿದ್ದರು. ಕುಮಾರ ತೇಜಸ್ವಿ ಗಾಂವ್ಕಾರ ಹೆಗ್ಗಾರ ರಚಿಸಿದ ಹೃದಯದ ಮಾತು ಕೇಳು ನನ್ನ ಒಲವೇ ಕಾದಂಬರಿ ಪುಸ್ತಕವನ್ನು ಶ್ರೀಪಾದರು ಪ್ರಧಾನ ಮಾಡಿದರು. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು,ಶಿಕ್ಷಕ ಚಂದ್ರಶೇಖರ ಎಸ್ ಕಾರ್ಯಕ್ರಮ ನಿರ್ವಹಿಸಿದರು.