ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ 150 ನೇ ಜನ್ಮ ದಿನವನ್ನು ತಾಲ್ಲೂಕಿನಲ್ಲಿ ಶಿಸ್ತು ಬದ್ದ ವಾಗಿ ಅಚ್ಚ ಕಟ್ಟಾಗಿ ಆಚರಿಸಲಾಯಿತು, ಮತ್ತು ಪಟೇಲರ ಆದರ್ಶ ಗಳನ್ನು ಸ್ಮರಿಸಲಾಯಿತು, ಆದರೆ ಶುಕ್ರವಾರ ಬೆಳ್ಳಮ ಬೆಳಿಗ್ಗೆ ಜೋಯಿಡಾ ದಲ್ಲಿ ಪೊಲೀಸ್ ಇಲಾಖೆ ಏಕತಾ ಓಟ ವನ್ನು (ಮ್ಯಾರಾಥಾನ)ನಡೆಸಿ ಜನರಲ್ಲಿ ಜಾಗೃತಿ ಮೂಡಿ ಸಿದರು. ತಾಲೂಕಿನ ಜನರ ಸ್ಪಂದನೆಗೆ ಕೂಡಲೇ ನೆರವಾಗುವ ಸಿ ಪಿ ಐ, ಚಂದ್ರಶೇಖರ್ ಹರಿಹರ ಪಿ ಎಸ್ ಐ ಮಹೇಶ ಮಾಳಿ ಮತ್ತು ರಾಮನಗರ ಪಿಎಸ್ಐ ಮಹಾಂತೇಶ್ ನಾಯಕ ಇವರ ನೇತೃತ್ವದಲ್ಲಿ ಇಲಾಖೆಯ ಹಿರಿಕಿರಿಯ ಪೊಲೀಸರು ಬೆಳಿಗ್ಗೆ ಏಳು ಗಂಟೆ ಯಿಂದ ಏಳು ನವವತ್ತರ ವರೆಗೆ ಏಕತಾ ಓಟ ನಡೆಸಿದರು.

ಏಕತಾ ಓಟದ ಮಾರ್ಗ ಜೊಯಿಡಾ ಪೊಲೀಸ್ ಠಾಣೆಯಿಂದ ಜೊಯಿಡಾ ಬಸ್ ನಿಲ್ದಾಣ ಶಿವಾಜಿ ವೃತ್ತ- ಅಂಬೇಡ್ಕರ್ ಭವನ ಪೆಟ್ರೋಲ್ ಪಂಪ್ – ಶಿವಾಜಿ ವೃತ್ತ ಮಾರ್ಗವಾಗಿ ಪೊಲೀಸ್ ಠಾಣೆಗೆ ಸುಮಾರು 4 ಕಿಲೋ ಮೀಟರ್ ಏಕತಾ ಓಟ ಮಾಡಿದರು ನಂತರ ಜೋಯಿಡಾ ಪೊಲೀಸ್ ವೃತ್ತ ಕಛೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಏಕತಾ ಓಟಕ್ಕೆ ವಿರಾಮ ನೀಡುವ ಮೂಲಕ ಜಾಗೃತಿ ಮೂಡಿಸಿದರು

 
							 
			 
			 
			 
			 
		 
			 
			 
			 
			